ಸೋಮವಾರ, ನವೆಂಬರ್ 18, 2019
26 °C

ದಕ್ಷಿಣ ಭಾರತದ ಉದ್ಯಮಿ ಕೈ ಹಿಡಿಯಲಿರುವ ಕಾಜಲ್

Published:
Updated:

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್‌ ಅಗರ್‌ವಾಲ್‌ ಅವರು ಸದ್ಯದಲ್ಲೇ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿ ಕಾಜಲ್‌ ಅಗರ್‌ವಾಲ್‌ ಮದುವೆಯಾಗಲಿದ್ದಾರೆ. ಸದ್ಯ ‘ಇಂಡಿಯನ್‌ 2’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಅವರು ಮದುವೆ ಸಿದ್ಧತೆಯಲ್ಲೂ ತೊಡಗಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿದೆ.

ಕಳೆದ ಎರಡು ವರ್ಷಗಳಿಂದ ಕಾಜಲ್‌ ಮದುವೆ ಸುದ್ದಿ ಹಾಗೂ ಅವರ ರಿಲೇಷನ್‌ಶಿಪ್‌ ಬಗ್ಗೆ ಸುದ್ದಿಗಳು ಹರಡುತ್ತವೇ ಇದ್ದವು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನಾನು ಸದ್ಯದಲ್ಲೇ ಮದುವೆಯಾಗಲಿದ್ದೇನೆ’ ಎಂದು ಹೇಳಿರುವ ಅವರು, ತಮ್ಮ ಕೈಹಿಡಿಯುವ ವರನ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಈ ಹಿಂದೆ ತಾನು ಯಾವುದೇ ಕಾರಣಕ್ಕೂ ಸಿನಿಮಾ ಇಂಡಸ್ಟ್ರಿಯವರನ್ನು ಮದುವೆಯಾಗುವುದಿಲ್ಲ ಎಂದು ಕಾಜಲ್‌ ಹೇಳಿದ್ದರು. ಅವರ ಹೆಸರು ಉದ್ಯಮಿಯೊಬ್ಬರ ಜೊತೆ ಕೇಳಿಬಂದಿತ್ತು. ಅವರ ಜೊತೆಯೇ ಹಸೆಮಣೆಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇದೆ. ಇನ್ನೊಂದೆಡೆ ಹೆತ್ತವರು ಆಯ್ಕೆ ಮಾಡಿದ ಯುವಕನನ್ನು ಕಾಜಲ್‌ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

ಇದನ್ನೂ ಓದಿ: ಹಾಲಿವುಡ್‌ಗೆ ಕಾಜಲ್ ಲಗ್ಗೆ

ಪ್ರತಿಕ್ರಿಯಿಸಿ (+)