ಬೆಂಗಳೂರು: ಬಾಡಿಗೆ ತಾಯಿಯಾಗಿ ಮಗುವನ್ನು ಹೆತ್ತಿದ್ದ ನಟಿ ಕೃತಿ ಸನೋನ್, ಹೆರಿಗೆಯ ಬಳಿಕ 15 ಕೆಜಿ ತೂಕ ಕಳೆದುಕೊಂಡಿದ್ದಾರೆ!
ಹೌದು, ‘ಮಿಮಿ’ ಚಿತ್ರದಲ್ಲಿನ ಪಾತ್ರಕ್ಕಾಗಿ ತೂಕ ಏರಿಸಿಕೊಂಡು ಸುದ್ದಿಯಾಗಿದ್ದ ನಟಿ, ಈಗ ತೂಕ ಕಳೆದುಕೊಂಡು ಸದ್ದು ಮಾಡಿದ್ದಾರೆ.
ಬಾಡಿಗೆ ತಾಯ್ತನದ ಕಥೆಯನ್ನು ಒಳಗೊಂಡಿದ್ದ ಕೃತಿ ಸನೊನ್ ಅಭಿನಯದ ಚಿತ್ರ ‘ಮಿಮಿ’ ಇತ್ತೀಚೆಗೆ ಬಿಡುಗಡೆಯಾಗಿತ್ತು. ಚಿತ್ರಕ್ಕಾಗಿ ಕೃತಿ 15 ಕೆಜಿ ತೂಕ ಏರಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದರು.
15 ಕೆಜಿ ತೂಕ ಏರಿಸುವುದು ನಟಿ ಕೃತಿಗೆ ದೊಡ್ಡ ಸವಾಲಾಗಿರಲಿಲ್ಲ.. ಆದರೆ ಈಗ 15 ಕೆಜಿ ತೂಕ ಇಳಿಸಿ, ಮತ್ತೆ ಮೊದಲಿನಂತಾಗುವುದು ಕೃತಿಗೆ ಸವಾಲಾಗಿದೆ. ಅದಕ್ಕಾಗಿ ಅವರು ಫಿಟ್ನೆಸ್-ವರ್ಕೌಟ್ ಮೊರೆ ಹೋಗಿದ್ದಾರೆ.
ಮೂರು ತಿಂಗಳ ಕಾಲ ಚಿತ್ರೀಕರಣಕ್ಕಾಗಿ ನಟಿ ಕೃತಿ ಯಾವುದೇ ಯೋಗ, ವರ್ಕೌಟ್ ಕೂಡ ಮಾಡಿಲ್ಲ. ಪ್ರಸ್ತುತ ಯಾಸ್ಮಿನ್ ಕರಾಚಿವಾಲ ಮತ್ತು ರಾಬಿನ್ ಭೇಲ್ ಅವರ ಬಳಿ ಫಿಟ್ನೆಸ್ ಟ್ರೈನಿಂಗ್ ಪಡೆದು, 15 ಕೆಜಿ ತೂಕ ಕಳೆದುಕೊಳ್ಳುವಲ್ಲಿ ನಟಿ ಯಶಸ್ವಿಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.