ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಗಳ ಬೆಳಕಿನಲ್ಲಿ ಪಿಗ್ಗಿ ಮನೆ

Last Updated 26 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ–ರಣವೀರ್‌ ಸಿಂಗ್‌ ಮದುವೆ ಸುದ್ದಿಗಳ ಭರಾಟೆ ಸ್ವಲ್ಪ ಕಡಿಮೆಯಾಗುತ್ತಿದೆ. ಎಲ್ಲರ ಕುತೂಹಲದ ಕಣ್ಣುಗಳು ಈಗ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಪಾಪ್‌ ಗಾಯಕ ನಿಕ್‌ ಜೋನ್ಸ್‌ ಮದುವೆ ಸುದ್ದಿಗಳತ್ತ ನೆಟ್ಟಿವೆ. ಮುಂಬೈನ ಜುಹುನಲ್ಲಿರುವ ಪಿಗ್ಗಿ ಮನೆಯಲ್ಲಿ ಮದುವೆಗೆ ಭರ್ಜರಿ ತಯಾರಿ ನಡೆದಿದೆ.

ಮದುಮಗ ನಿಕ್ ಜೋನ್ಸ್‌ ಕಳೆದ ಶುಕ್ರವಾರವಷ್ಟೇ ಮುಂಬೈನಲ್ಲಿ ಬಂದಿಳಿದಿದ್ದಾನೆ. ಪಿಗ್ಗಿ ಮನೆ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದೆ. ಮದುವೆ ಮನೆಯಲ್ಲಿ ನೆಂಟರು, ಬಂಧುಗಳು ಮತ್ತು ಪಿಗ್ಗಿ ಸ್ನೇಹಿತರ ದಂಡು ನೆರೆದಿದೆ. ಇದೇ 29ರಿಂದ ವಿವಿಧ ಧಾರ್ಮಿಕ ಮತ್ತು ಕೌಟುಂಬಿಕ ಸಂಪ್ರದಾಯಗಳು ಆರಂಭವಾಗಲಿವೆ. ಪ್ರಿಯಾಂಕಾ ತಾಯಿ ಮಧು ಚೋಪ್ರಾ ಅಂತಿಮ ಹಂತದ ಸಿದ್ಧತೆಗಳ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

ಮದುವೆ ಸಿದ್ಧತೆಗಳ ನಡುವೆ, ಪಿಗ್ಗಿ ನಟಿಸುತ್ತಿರುವ ‘ದಿ ಸ್ಕೈ ಈಸ್ ಪಿಂಕ್‌’ ಚಿತ್ರತಂಡ ಮದುಮಕ್ಕಳಿಗಾಗಿ ಮೋಜಿನ ಕೂಟ ಏರ್ಪಡಿಸಿತ್ತು. ನಿರ್ದೇಶಕಿ ಸೋನಾಲಿ ಬೋಸ್‌ ಮತ್ತು ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್‌ ನೇತೃತ್ವದಲ್ಲಿ ಈ ಪಾರ್ಟಿ ನಡೆದಿತ್ತು. ಹಾಲಿವುಡ್‌, ಬಾಲಿವುಡ್‌ ಮತ್ತು ಕಿರುತೆರೆಯ ಸ್ನೇಹಿತರಿಗಾಗಿ ವಿದೇಶಗಳಲ್ಲಿ ಪಾರ್ಟಿಗಳನ್ನು ಹಮ್ಮಿಕೊಂಡಿದ್ದ ಪ್ರಿಯಾಂಕಾ, ಕೆಲವು ಬ್ಯಾಚುಲರ್‌ ಪಾರ್ಟಿಗಳಲ್ಲೂ ಹೆಜ್ಜೆ ಹಾಕಿ ಕುಣಿದು ಖುಷಿಪಟ್ಟಿದ್ದರು.

ಮದುಮಕ್ಕಳು ತಮ್ಮ ಮದುವೆಯ ದಿನಾಂಕವನ್ನು ಖಚಿತಪಡಿಸಿಲ್ಲವಾದರೂ ಡಿಸೆಂಬರ್‌ 2ರಂದು ಜೋಧ್‌ಪುರದ ಉಮೈದ್‌ ಭವನ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ, ಅರಮನೆಯಲ್ಲಿ ಅದ್ದೂರಿ ತಯಾರಿಗಳು ಆರಂಭವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT