ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದುವೆ ವಿಡಿಯೊ ಹಂಚಿಕೊಂಡ ನಟಿ ಸೋನಾಕ್ಷಿ: ತಂದೆಯ ಮುಖದಲ್ಲಿ ಏನಿದು ದುಗುಡ ಭಾವನೆ?

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಜೊತೆ ಇತ್ತೀಚೆಗೆ ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾದರು.
Published 10 ಜುಲೈ 2024, 6:52 IST
Last Updated 10 ಜುಲೈ 2024, 6:52 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಜೊತೆ ಇತ್ತೀಚೆಗೆ ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾದರು.

ಜೂನ್ 23 ರಂದು ಮದುವೆಯಾಗಿತ್ತು. ಮದುವೆ ರಹಸ್ಯವಾಗಿ ನಡೆದಿತ್ತು. ಮದುವೆಯಾದ ಇದೇ ಮೊದಲ ಬಾರಿಗೆ ಸೋನಾಕ್ಷಿ ತಮ್ಮ ಮದುವೆಯ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಜಹೀರ್‌ ಇಕ್ಬಾಲ್‌ ಅವರ ಜೊತೆಗಿನ ಆಕರ್ಷಕ ಫೋಟೊಗಳನ್ನು ಹಂಚಿಕೊಂಡು ಮದುವೆ ಅಂದ್ರೆನೇ ಅಸ್ತವ್ಯಸ್ತಗಳ ಗೂಡು. ಆದರೆ ಅದರಲ್ಲೂ ನೀವು ಎಂದೂ ಮರೆಯಲಾಗದ ನೆನಪುಗಳನ್ನು ಕೂಡಿಟ್ಟುಕೊಳ್ಳಬಹುದು ಎಂದು ಹೇಳಿಕೊಂಡಿದ್ದಾರೆ.

ಈ ಮದುವೆಯಲ್ಲಿ ಸಾಕಷ್ಟು ಸಂಭ್ರಮಪಟ್ಟೆವು ಎಂದು ನಟಿ ಹೇಳಿಕೊಂಡಿದ್ದಾರೆ. ಇದರ ಜೊತೆ ಮದುವೆಯ ಕಿರು ವಿಡಿಯೊ ಒಂದನ್ನು ಸೋನಾಕ್ಷಿ ಹಂಚಿಕೊಂಡಿದ್ದು ಆ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೊದಲ್ಲಿ ಸೋನಾಕ್ಷಿ ತಂದೆ, ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಎಲ್ಲಿಯೂ ಸಂತಸ ವ್ಯಕ್ತಪಡಿಸಿಲ್ಲ. ಮುಖದಲ್ಲಿ ಏನೋ ಒಂದು ನೋವಿನ ಭಾವನೆಯನ್ನು ತೋರ್ಪಡಿಸಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಹಲವರು ಈ ವಿಡಿಯೊವನ್ನು ಹಂಚಿಕೊಂಡು ಸಾಮಾಜಿಕ ತಾಣಗಳಲ್ಲಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಮದುವೆಗೆ ಸೋನಾಕ್ಷಿ ತಂದೆಯ ಸಂಪೂರ್ಣ ಒಪ್ಪಿಗೆ ಇತ್ತೇ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.

ತಂದೆಯಿಂದ ವಿರೋಧ ವ್ಯಕ್ತವಾಗಿತ್ತೇ?

ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಅವರು ಮಗಳು ಮಾತು ಕೇಳುತ್ತಿಲ್ಲ, ಈ ಮದುವೆ ನನಗೆ ಇಷ್ಟವಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಆದರೆ, ನಂತರ ಈ ಎಲ್ಲ ಸುದ್ದಿಗಳಿಗೆ ಸ್ವತಃ ನಟ ಶತ್ರುಘ್ನ ಅವರೇ ತೆರೆ ಎಳೆದಿದ್ದರು.

ಈ ಕುರಿತು ಟೈಮ್ಸ್ ನೌ ವಾಹಿನಿ ಜೊತೆ ಮಾತನಾಡಿದ್ದ ಅವರು, ಎಲ್ಲ ಮದುವೆಗಳಲ್ಲಿ ಮದುವೆ ಮೊದಲು ಅನೇಕ ಒತ್ತಡಗಳು ಇರುವುದು ಸಹಜ. ಹಾಗೇ ನಮ್ಮಲ್ಲೂ ಇತ್ತು. ಸದ್ಯ ಅದೆಲ್ಲ ತಿಳಿಯಾಗಿದ್ದು ಜೂನ್ 23 ರಂದು ನಡೆಯುವ ಮದುವೆಯಲ್ಲಿ ನಾವೆಲ್ಲ ಭಾಗಿಯಾಗುತ್ತಿದ್ದೇವೆ ಎಂದು ಹೇಳಿದ್ದರು

ನೆಟ್‌ಫ್ಲಿಕ್ಸ್‌ನಲ್ಲಿ ಸೋನಾಕ್ಷಿ ಅವರ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ವೆಬ್‌ ಸರಣಿ ಬಿಡುಗಡೆಗೊಂಡ ಬಳಿಕ ಮದುವೆಯ ಸುದ್ದಿ ಹೊರಬಿದ್ದಿತ್ತು.

ಸೋನಾಕ್ಷಿ ಮತ್ತು ಇಕ್ಬಾಲ್‌ 2022ರಲ್ಲಿ ಬಿಡುಗಡೆಯಾದ ‘ಡಬಲ್‌ ಎಕ್ಸ್‌ಎಲ್‌’ ಚಿತ್ರದಲ್ಲಿ ನಟಿಸಿದ್ದರು. ಆಗಿನಿಂದ ಡೇಟಿಂಗ್‌ ಮಾಡುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಆದರೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT