ಶನಿವಾರ, ಜುಲೈ 2, 2022
22 °C

2023ಕ್ಕೆ 'ಆದಿಪುರುಷ್‌': ರಾಮನಾಗಿ ಪ್ರಭಾಸ್‌, ರಾವಣನಾಗಿ ಸೈಫ್‌ ಅಲಿ ಖಾನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಶಿವರಾತ್ರಿ ದಿನದಂದು 'ಆದಿಪುರುಷ್‌' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 2023, ಜನವರಿ 12ಕ್ಕೆ ವಿಶ್ವದಾದ್ಯಂತ 3ಡಿ ಚಿತ್ರ ಬಿಡುಗಡೆಯಾಗಲಿದೆ.


ಆದಿಪುರುಷ್‌ ಚಿತ್ರದ ಪೋಸ್ಟರ್

ಚಿತ್ರವು ಹಿಂದು ಮಹಾಕಾವ್ಯ ರಾಮಾಯಣದ ಕಥಾಹಂದರವನ್ನು ಒಳಗೊಂಡಿದೆ. ದುಷ್ಟ ಶಕ್ತಿಯ ವಿರುದ್ಧದ ಗೆಲುವನ್ನು ಸಂಭ್ರಮಿಸುವ ಸಿನಿಮಾವನ್ನು ಓಂ ರೌತ್‌ ಅವರು ನಿರ್ದೇಶಿಸಿದ್ದಾರೆ.

ನಟ ಪ್ರಭಾಸ್‌ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸೈಫ್‌‌ ಅಲಿ ಖಾನ್‌ ಅವರು ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಆಗಸ್ಟ್‌ 11, 2022ಕ್ಕೆ 'ಆದಿಪುರುಷ್‌' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು.

ಶಿವರಾತ್ರಿಯ ಪ್ರಯುಕ್ತ ಸಾಮಾಜಿಕ ತಾಣಗಳ ಮೂಲಕ ಚಿತ್ರತಂಡವು 'ಆದಿಪುರುಷ್‌' ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಕೃತಿ ಸನನ್‌ ಮತ್ತು ಸನ್ನಿ ಸಿಂಗ್‌ ಅವರು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.

3ಡಿ ಚಿತ್ರ 'ಆದಿಪುರುಷ್‌' ವಿಶ್ವದಾದ್ಯಂತ 2023ರ ಜನವರಿ 12ಕ್ಕೆ ಬಿಡುಗಡೆಯಾಗಲಿದೆ ಎಂದು ಪ್ರಭಾಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಓಂ ರೌತ್‌ ಅವರು 2020ರಲ್ಲಿ 'ತಾನಾಜಿ: ದಿ ಅನ್ಸಂಗ್‌ ವಾರಿಯರ್‌' ಚಿತ್ರ ನಿರ್ದೇಶಿಸಿದ್ದರು. ಅಜಯ್‌ ದೇವಗನ್‌ ಅವರು ಮರಾಠಾ ಯೋಧ ತಾನಾಜಿ ಅವರ ಪಾತ್ರವನ್ನು ಪೋಷಿಸಿದ್ದರು. ಸೈಫ್‌ ಅಲಿ ಖಾನ್‌ ಅವರು ಉಧಯಬಾನ್‌ ಸಿಂಗ್‌ ರಾಥೋರ್‌ ಪಾತ್ರ ನಿಭಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು