ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೇಶ್ ರಾವಲ್ ಪುತ್ರನ ಸಿನಿ ಎಂಟ್ರಿ

Last Updated 7 ಏಪ್ರಿಲ್ 2020, 14:14 IST
ಅಕ್ಷರ ಗಾತ್ರ

‘ಹೇರಾಫೇರಿ’ ಚಿತ್ರ ವೀಕ್ಷಿಸಿದವರಿಗೆ ಪರೇಶ್ ರಾವಲ್ ಅವರ ಅಭಿನಯ ಮರೆಯಲು ಸಾಧ್ಯವಿಲ್ಲ. ಅಕ್ಷಯ್ ಕುಮಾರ್ ಹಾಗೂ ಸುನಿಲ್ ಶೆಟ್ಟಿ ಅವರದ್ದು ಒಂದು ಬಗೆಯ ಅಭಿನಯವಾದರೆ, ರಾವಲ್ ಅವರದ್ದು ಇನ್ನೊಂದು ಬಗೆಯ, ಹೊಟ್ಟೆ ಹುಣ್ಣಾಗುವಂತೆ ನಗಿಸುವ ಅಭಿನಯ.

ಅಂದಹಾಗೆ, ರಾವಲ್ ಅವರ ಪುತ್ರ ಆದಿತ್ಯ ಈಗ ನಟನೆ ಆರಂಭಿಸುತ್ತಿದ್ದಾರೆ. ಅವರು ಜೀ5 ವೇದಿಕೆಗಾಗಿ ಸಿದ್ಧವಾಗುತ್ತಿರುವ ‘ಬಂಫಾಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ನಿರ್ದೇಶಿಸುತ್ತಿರುವವರು ರಂಜನ್ ಚಂದೆಲ್. ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದ ಶಾಲಿನಿ ಪಾಂಡೆ ಅವರು ‘ಬಂಫಾಡ್’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ಆದಿತ್ಯ ಅವರು ಈ ಚಿತ್ರದಲ್ಲಿ ನಾಸಿರ್ ಜಮಾಲ್ ಎನ್ನುವ ಪಾತ್ರ ನಿಭಾಯಿಸುತ್ತಿದ್ದಾರೆ. ‘ಇಷ್ಟೊಂದು ಥ್ರಿಲ್ ಇರುವ ಸಿನಿಮಾ ಮೂಲಕ ನನ್ನ ವೃತ್ತಿ ಜೀವನ ಆರಂಭಿಸುತ್ತಿರುವುದಕ್ಕೆ ಖುಷಿ ಇದೆ. ಪ್ರೇಮಕಥೆ ಈ ಚಿತ್ರದ ಪ್ರಮುಖ ಎಳೆ. ಅದರ ಜೊತೆಯಲ್ಲೇ ಇತರ ಅಂಶಗಳೂ ಇದರಲ್ಲಿ ಇರಲಿವೆ’ ಎನ್ನುತ್ತಾರೆ ಆದಿತ್ಯ.

ಶಾಲಿನಿ ಅವರು ಇದರಲ್ಲಿ ನೀಲಂ ಎನ್ನುವ ಪಾತ್ರ ನಿಭಾಯಿಸುತ್ತಿದ್ದಾರೆ. ‘ಇದು ಬಹಳ ಗಟ್ಟಿತನ ಇರುವ ಹಾಗೂ ಬೋಲ್ಡ್ ಆಗಿರುವ ಪಾತ್ರ’ ಎನ್ನುವುದು ಶಾಲಿನಿ ನೀಡುವ ವಿವರಣೆ. ಬಂಫಾಡ್ ಚಿತ್ರದ ಪೋಸ್ಟರ್‌ಅನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಇದು ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT