ಮಂಗಳವಾರ, ಜನವರಿ 31, 2023
19 °C

ಅಜಯ್ ದೇವಗನ್, ರೋಹಿತ್ ಶೆಟ್ಟಿ ಸಿಂಗಮ್‌–3 ಘೋಷಣೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ನಟ ಅಜಯ್ ದೇವಗನ್ ಮತ್ತು ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಮತ್ತೊಮ್ಮೆ ‘ಸಿಂಗಮ್’ನೊಂದಿಗೆ ಬರುತ್ತಿದ್ದಾರೆ. ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರದ 3ನೇ ಭಾಗಕ್ಕೆ ಸಜ್ಜಾಗಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. 

ಹೊಸ ವರ್ಷದಂದು ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಅಜಯ್‌, ಚಿತ್ರದ 3ನೇ ಭಾಗ ಘೋಷಣೆಯೊಂದಿಗೆ ರೋಹಿತ್ ಅವರ ಜೊತೆಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

‘@itsrohitshetty ಅವರ ಸಿಂಗಮ್ ಎಗೇನ್ ಕಥೆ ಕೇಳುವುದರೊಂದಿಗೆ ಹೊಸ ವರ್ಷವನ್ನು ಉತ್ತಮವಾಗಿ ಆರಂಭಿಸಿರುವೆ. ನಾನು ಕೇಳಿದ ಸ್ಕ್ರಿಪ್ಟ್ ಅದ್ಬುತವಾಗಿದೆ. ದೇವರ ಕೃಪೆಯಿದ್ದರೆ ಇದು ನಮ್ಮ 11 ನೇ ಬ್ಲಾಕ್‌ಬಸ್ಟರ್ ಚಿತ್ರ ಆಗಿರುತ್ತದೆ’ ಎಂದು ಅಜಯ್‌ ಬರೆದುಕೊಂಡಿದ್ದಾರೆ. ಇದಕ್ಕೆ ರೋಹಿತ್‌ ಶೆಟ್ಟಿ ಕೂಡ ಪ್ರತಿಕ್ರಿಯಿಸಿದ್ದಾರೆ. 

ನಟಿ ದೀಪಿಕಾ ಪಡುಕೋಣೆ ಕೂಡ ಸೀಕ್ವೆಲ್‌ನಲ್ಲಿ ಇರುತ್ತಾರೆ ಎಂದು ತಮ್ಮದೇ ನಿರ್ದೇಶನದ "ಸರ್ಕಸ್"  ಚಿತ್ರದ ಪ್ರಚಾರದ ಸಮಯದಲ್ಲಿ ರೋಹಿತ್  ಘೋಷಿಸಿದ್ದರು. 

2011 ರಲ್ಲಿ ಸಿಂಗಮ್‌ ತೆರೆಗೆ ಬಂದು ಅಬ್ಬರಿಸಿತ್ತು. ರೋಹಿತ್ ಅವರ 'ಕಾಪ್ ಯೂನಿವರ್ಸ್' ನ ಮೊದಲ ಭಾಗ ಇದಾಗಿತ್ತು. 2010 ರಲ್ಲಿ ತೆರೆಕಂಡ ತಮಿಳು ಸಿಂಗಮ್‌ ಚಲನಚಿತ್ರದ ರಿಮೇಕ್.  ಹರಿ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ, ಅನುಷ್ಕಾ ಶೆಟ್ಟಿ, ಪ್ರಕಾಶ್‌ ರಾಜ್‌ ಮುಖ್ಯಭೂಮಿಕೆಯಲ್ಲಿದ್ದರು. ಇದರ ಹಿಂದಿ ರಿಮೇಕ್‌ ಚಿತ್ರದಲ್ಲಿ ಅಜಯ್ ಮುಖ್ಯ ಪಾತ್ರದಲ್ಲಿ ಬಾಜಿರಾವ್ ಸಿಂಗಮ್‌ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಕಾಜಲ್‌ ಅಗರ್‌ವಾಲ್‌, ಪ್ರಕಾಶ್‌ ರಾಜ್‌ ಕೂಡ ಇದ್ದರು. ತಮಿಳಿನಲ್ಲಿ ಸಿಂಗಮ್‌–3 ತೆರೆ ಕಂಡಿದೆ. ಹಿಂದಿಯಲ್ಲಿ ಅದರ ರಿಮೇಕ್‌ ಆಗಿರಲಿದೆಯಾ ಎಂಬ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಚಿತ್ರದ ಯಶಸ್ಸಿನ ನಂತರ, 2014 ರಲ್ಲಿ ‘ಸಿಂಗಮ್‌ ರಿಟರ್ನ್ಸ್’ನೊಂದಿಗೆ ರೋಹಿತ್‌ ಮತ್ತು ಅಜಯ್‌ ಒಂದಾಗಿದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು