'ಲವ್ ಯೂ ರಚ್ಚು' ಎನ್ನಲು ರೆಡಿ ಆಗಿದ್ದಾರೆ ಅಜಯ್ ರಾವ್

ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅಜಯ್ ರಾವ್ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ 'ಲವ್ ಯೂ ರಚ್ಚು' ಎಂದು ಹೆಸರಿಡಲಾಗಿದೆ. ಚಂದನವನದ ಖ್ಯಾತ ನಿರ್ದೇಶಕ ಶಶಾಂಕ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದಾರೆ. ಹೊಸ ನಿರ್ದೇಶಕ ಶಂಕರ್ ರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಗುರು ದೇಶಪಾಂಡೆ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ರಚಿತಾ ಸದ್ಯ ಚಂದನವನದ ಬ್ಯುಸಿ ನಟಿ. ಇವರ ಕೈಯಲ್ಲಿ ಈಗಾಗಲೇ ಹಲವು ಸಿನಿಮಾಗಳಿವೆ. ಒಂದು ಡಜನ್‌ನಷ್ಟು ಸಿನಿಮಾಗಳು ಅವರ ಕೈಯಲ್ಲಿದ್ದು ಅವು ವಿವಿಧ ಹಂತದಲ್ಲಿವೆ.
ಇದನ್ನೂ ಓದಿ: ‘ಆಹಾ’ದಲ್ಲಿ ತಮನ್ನಾಳ 11 ಅವರ್
ಲವ್ ಯೂ ರಚ್ಚು ಚಿತ್ರದ ಬಗ್ಗೆ ಮಾತನಾಡಿರುವ ರಚಿತಾ ‘ಸಿನಿಮಾದ ಶೀರ್ಷಿಕೆ ಕೇಳಿದಾಗ ನನಗೆ ಆಶ್ಚರ್ಯವಾಗಿತ್ತು. ಸ್ಕ್ರಿಪ್ಟ್ ಕೇಳಿದ ಮೇಲೆ ಖುಷಿ ಆಗಿತ್ತು. ನಾನು ಯಾವ ಕಾರಣಕ್ಕೂ ಈ ಪ್ರಾಜೆಕ್ಟ್ ಅನ್ನು ಕೈ ಬಿಡುವುದಿಲ್ಲ ಎಂದು ನಿರ್ಧರಿಸಿದ್ದೆ. ಶಶಾಂಕ್, ಗುರು ದೇಶಪಾಂಡೆ ಹಾಗೂ ಅಜಯ್ ರಾವ್ ಜೊತೆ ಕೆಲಸ ಮಾಡಲು ಖುಷಿ ಇದೆ. ಒಂದು ದೊಡ್ಡ ಪಯಣದ ಭಾಗವಾಗಿರುವುದಕ್ಕೆ ಖುಷಿ ಎನ್ನಿಸುತ್ತಿದೆ’ ಎಂದಿದ್ದಾರೆ.
ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಅಜಯ್ ರಾವ್ ಹಿಂದಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ರಾವ್ ಹಾಗೂ ರಚಿತಾ ಜೋಡಿ ಪ್ರೇಕ್ಷಕರನ್ನು ಹೇಗೆ ರಂಜಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.