ಈಗ ಟಾಲಿವುಡ್ನಲ್ಲಿ ಹಿಟ್ ಆದ ಸಿನಿಮಾಗಳನ್ನು ಬಾಲಿವುಡ್ಗೆ ರಿಮೇಕ್ ಮಾಡುವ ಟ್ರೆಂಡ್ ಹೆಚ್ಚುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಸಮಂತಾ ಅಕ್ಕಿನೇನಿ ಅಭಿನಯದ ‘ಓ ಬೇಬಿ’ ಚಿತ್ರ. ಈ ಚಿತ್ರದ ರಿಮೇಕ್ಗೆ ಸಿದ್ಧತೆ ನಡೆಯುತ್ತಿದ್ದು, ಮೂಲಚಿತ್ರದಲ್ಲಿ ಸಮಂತಾ ಮಾಡಿರುವ ಮುಖ್ಯಪಾತ್ರಕ್ಕೆ ಆಲಿಯಾ ಭಟ್ ಹಾಗೂ ಜಾಹ್ನವಿ ಕಪೂರ್ ಹೆಸರು ಕೇಳಿಬರುತ್ತಿದೆ.

ರಾನಾ ದಗ್ಗುಬಾಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ.

ಪ್ರಮುಖ ಪಾತ್ರ ಸಂಬಂಧ ಸಿನಿಮಾ ನಿರ್ಮಾಣ ತಂಡ ಆಲಿಯಾ ಭಟ್ ಜೊತೆ ಮಾತುಕತೆ ನಡೆಸಿದೆ. ಅವರು ಚಿತ್ರದ ಪಾತ್ರ ಹಾಗೂ ಚಿತ್ರಕತೆ ಬಗ್ಗೆ ಹರ್ಷ ವ್ಯಕ್ತಪಡಿಸಿ, ನಟಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಗಾಳಿಸುದ್ದಿ ಹರಿದಾಡುತ್ತಿದೆ.

ಇನ್ನೊಂದು ಮೂಲಗಳ ಪ್ರಕಾರ,ಬೋನಿ ಕಪೂರ್ ಅವರು ಈ ಚಿತ್ರವನ್ನು ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ಆಸಕ್ತಿ ತೋರಿಸಿದ್ದು,ಪುತ್ರಿ ಜಾಹ್ನವಿ ನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಇದರ ಬಗ್ಗೆಸ್ಪಷ್ಟ ಮಾಹಿತಿ ಇಲ್ಲ.

ಸದ್ಯ ಆಲಿಯಾ ಭಟ್, ರಣಬೀರ್ ಕಪೂರ್ ಜೊತೆ ‘ಬ್ರಹ್ಮಾಸ್ತ್ರ’, ಸಂಜಯ್ ದತ್ ಅವರ ‘ಸಡಕ್ 2’ ಹಾಗೂ ಎಸ್. ಎಸ್. ರಾಜಮೌಳಿ ಅವರ ಬಹುಭಾಷಾ ಚಿತ್ರ ‘ಆರ್ಆರ್ಆರ್’ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಾಹ್ನವಿ ಕಪೂರ್ ರಣವೀರ್ ಸಿಂಗ್ ಅವರ ‘ತಖ್ತ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.