ಸೋಮವಾರ, ಮಾರ್ಚ್ 8, 2021
25 °C

20 ಕೆ.ಜಿ ತೂಕ ಇಳಿಸಲು ಮುಂದಾದ ಅಮೀರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಘಜಿನಿ’ ಹಾಗೂ ‘ದಂಗಲ್’ ಸಿನಿಮಾಗಳಿಗೆ ಅಮೀರ್ ಖಾನ್‌  ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವ ಹಾಗೂ ಇಳಿಸಿಕೊಳ್ಳುವ ಸಾಹಸ ಮಾಡಿದ್ದರು. ‘ದಂಗಲ್’ಗೆ ಅವರು 97 ಕೆ.ಜಿ. ವರೆಗೂ ತೂಕ ಹೆಚ್ಚಿಸಿಕೊಂಡು, ನಂತರ ಮತ್ತೆ ಸ್ಲಿಮ್ ಆಂಡ್ ಫಿಟ್ ಆಗಿದ್ದರು. ಈಗ ಮತ್ತೊಮ್ಮೆ 20 ಕೆ.ಜಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾರೆ. 

ತಮ್ಮ ಮುಂದಿನ ಚಿತ್ರ ‘ಲಾಲ್‌ ಸಿಂಗ್‌ ಛಡ್ಡಾ’ಕ್ಕಾಗಿ ಅಮೀರ್‌ ತಯಾರಿ ನಡೆಸಿದ್ದು,  20 ಕೆ.ಜಿ ತೂಕ ಇಳಿಸಿಕೊಳ್ಳಲಿದ್ದಾರೆ. ಈ ಚಿತ್ರ 1994ರಲ್ಲಿ ಹಾಲಿವುಡ್‌ನಲ್ಲಿ ತೆರೆಕಂಡ ಟಾಮ್‌ ಹ್ಯಾಂಕ್ಸ್‌ ಅವರ ‘ಫಾರೆಸ್ಟ್‌ ಗಂಪ್‌’ ಚಿತ್ರದ ಹಿಂದಿ ರಿಮೇಕ್‌.

 ‘ಫಾರೆಸ್ಟ್‌ ಗಂಪ್‌’ ಸಿನಿಮಾವು ಉತ್ತಮ ನಟ ಪ್ರಶಸ್ತಿ ಸೇರಿದಂತೆ 6 ಆಸ್ಕರ್‌ ಪ್ರಶಸ್ತಿಗಳನ್ನು ಪಡೆದಿತ್ತು. 

ಕಳೆದ ವರ್ಷ ಬಿಡುಗಡೆಯಾದ ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಚಿತ್ರವು ಬಾಕ್ಸಾಫೀಸಿನಲ್ಲಿ ಸೋತಿತ್ತು. ಕಟು ಟೀಕೆಗಳೂ ವ್ಯಕ್ತವಾಗಿದ್ದವು. ಈ ಸಿನಿಮಾದ ನಂತರ ಅವರು ಜಾಗರೂಕರಾದಂತಿದೆ. 

ಅಮೀರ್‌ ತಮ್ಮ ಹುಟ್ಟುಹಬ್ಬ ಮಾರ್ಚ್‌ 14ರಂದು ‘ಲಾಲ್‌ ಸಿಂಗ್‌ ಛಡ್ಡಾ’ ಸಿನಿಮಾ ಬಗ್ಗೆ ಘೋಷಣೆ ಮಾಡಿದ್ದರು. ಅದರಲ್ಲಿ ಯುವಕನ ಪಾತ್ರ ನಿರ್ವಹಿಸಲು ಅವರು ತೂಕ ಇಳಿಸುವ ಸಾಹಸಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಕಠಿಣ ಡಯೆಟ್‌ ಹಾಗೂ ವರ್ಕೌಟ್‌ ಮಾಡುತ್ತಿದ್ದಾರೆ. 

ಅಮೀರ್‌ ಖಾನ್‌ನ ಸಿನಿಮಾಗಳ ಕುರಿತಾದ ಬದ್ಧತೆ ಹಾಗೂ ವೃತ್ತಿಪರತೆಯನ್ನು ನೋಡಿ ತಾವು ರಿಮೇಕ್‌ ಹಕ್ಕನ್ನು ನೀಡಿದ್ದಾಗಿ ಮೂಲ ಚಿತ್ರದ ನಿರ್ದೇಶಕರು ಹೇಳಿದ್ದಾರೆ. ಹಕ್ಕು ಪಡೆದುಕೊಳ್ಳಲು 5 ವರ್ಷ ತೆಗೆದುಕೊಂಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು