ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಯಾತ್ರೆ ಹೊರಟ ‘ಅಮೃತಮತಿ’

Last Updated 20 ಮಾರ್ಚ್ 2023, 8:39 IST
ಅಕ್ಷರ ಗಾತ್ರ

ಕನ್ನಡದ ಕಲಾತ್ಮಕ ಅಥವಾ ಪ್ರಯೋಗಾತ್ಮಕ ಚಿತ್ರಗಳನ್ನು ಹೆಚ್ಚು ಪ್ರೇಕ್ಷಕರಿಗೆ ತಲುಪಿಸುವ ಪರಿಕಲ್ಪನೆ ‘ಸಮುದಾಯದತ್ತ ಸಿನಿಮಾ’ ಮತ್ತು ‘ಚಿತ್ರಯಾತ್ರೆ’ ಮತ್ತೆ ಮುನ್ನೆಲೆಗೆ ಬಂದಿದೆ.

ಹೊಸ ಮಾದರಿಯ ಚಿತ್ರಗಳನ್ನು ಈ ಪರಿಕಲ್ಪನೆಯ ಮೂಲಕ ಪರ್ಯಾಯ ಬಿಡುಗಡೆ ಅಥವಾ ಪರ್ಯಾಯ ಪ್ರಯೋಗ ಎಂಬ ನೆಲೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಮಾದರಿಯಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಈ ಯಾತ್ರೆಗೆ ಹೊರಟು ನಿಂತಿದೆ.

ಈ ಪ್ರಯೋಗ ಹೇಗೆ?

‘ಚಿತ್ರಯಾತ್ರೆಗೆ ಮುಂಚೆ ವಿವಿಧ ಊರುಗಳ ನನ್ನ ಸ್ನೇಹಿತರು ಸಿನಿಮಾ ಕೂಪನ್‌ಗಳನ್ನು ಆಸಕ್ತರಿಗೆ ತಲುಪಿಸಿ ಹಣ ಸಂಗ್ರಹಿಸುತ್ತಾರೆ. ನಿಗದಿತ ದಿನದಂದು ಚಿತ್ರ ಪ್ರದರ್ಶನವನ್ನು ಮಾಡಲಾಗುತ್ತದೆ. ಕೆಲವು ಊರುಗಳಲ್ಲಿ ಪ್ರದರ್ಶನದ ನಂತರ ವಿಚಾರಗೋಷ್ಠಿಯೂ ನಡೆಯುತ್ತದೆ. ಇಂಥ ಚಿತ್ರಯಾತ್ರೆಯಿಂದ ನಮ್ಮ ಸಿನಿಮಾ ನೋಡುಗರಿಗೆ ತಲುಪುತ್ತದೆ. ನಿರ್ಮಾಪಕರಿಗೆ ಹಣವೂ ಬರುತ್ತದೆ’ ಎಂದಿದ್ದಾರೆ ಬರಗೂರು.

‘ನನ್ನ ನಿರ್ದೇಶನದ ‘ಅಮೃತಮತಿ’ ಸಿನಿಮಾವನ್ನು ಚಿತ್ರಯಾತ್ರೆಯ ಮೂಲಕ ಸಮುದಾಯದತ್ತ ಕೊಂಡೊಯ್ಯುವ ಯೋಜನೆಯನ್ನು ರೂಪಿಸಿದ್ದೇವೆ. ಈಗಾಗಲೇ ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ಮಳವಳ್ಳಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ಬಳ್ಳಾರಿ, ಹೊಸಪೇಟೆ, ಕಲಬುರ್ಗಿ, ಸಿರಾ, ಶಿವಮೊಗ್ಗ, ಚಾಮರಾಜನಗರಗಳಲ್ಲಿ ಸಿದ್ಧತೆಗಳು ನಡೆದಿವೆ. ಇನ್ನೂ ಕೆಲವು ಊರುಗಳು ಚಿತ್ರಯಾತ್ರೆಗೆ ಸೇರ್ಪಡೆಯಾಗಲಿವೆ.

ಒಂದೊಂದು ಊರಿನಲ್ಲಿ ಎರಡರಿಂದ ಐದಾರು ಪ್ರದರ್ಶನಗಳು ನಡೆಯಲಿವೆ. ಒಟ್ಟು ಒಂದು ನೂರು ಪ್ರದರ್ಶನಗಳನ್ನು ಏರ್ಪಡಿಸುವ ಗುರಿ ಹೊಂದಿದ್ದೇವೆ. ಈ ಚಿತ್ರಯಾತ್ರೆಗೆ ಅಧಿಕೃತವಾಗಿ ಇದೇ ಮಾರ್ಚ್ 24 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುತ್ತದೆ ಎಂದಿದ್ದಾರೆ’ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT