ಬೆಂಗಳೂರು: ಕನ್ನಡದ ‘ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಮತ್ತು ನಟ ಎಡ್ ವೆಸ್ಟ್‌ವಿಕ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಜನವರಿಯಲ್ಲಿ ಮದುವೆಗೆ ನಿಶ್ಚಯಿಸಿರುವುದಾಗಿ ಘೋಷಿಸಿದ್ದ ಜೋಡಿ, ಇಟಲಿಯಲ್ಲಿ ವಾರಾಂತ್ಯ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ಧಾರೆ.
ಈ ಜೋಡಿ ತಮ್ಮ ಮದುವೆಯ ಹಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಯಣ ಈಗತಾನೇ ಆರಂಭವಾಗಿದೆ ಎಂದು ಅಡಿ ಬರಹ ನೀಡಲಾಗಿದೆ.
ಆ್ಯಮಿ ಜಾಕ್ಸನ್, ಕಸೂತಿ ಮಾಡಲಾಗಿದ್ದ ಆಫ್-ಶೋಲ್ಡರ್‌ನ ಬಿಳಿ ಗೌನ್ ಧರಿಸಿದ್ದರೆ, ವೆಸ್ಟ್‌ವಿಕ್ ಕಪ್ಪು–ಬಿಳಿ ಉಡುಗೆ ಧರಿಸಿದ್ದರು.
ಜನವರಿಯಲ್ಲಿ ಸ್ವಿಡ್ಜರ್‌ಲ್ಯಾಂಡ್‌ನ ನೇತುವೆಯೊಂದರ ಮೇಲೆ 37 ವರ್ಷದ ವೆಸ್ಟ್‌ವಿಕ್, 32 ವರ್ಷದ ಜಾಕ್ಸನ್ ಅವರಿಗೆ ಪ್ರಪೋಸ್ ಮಾಡಿದ್ದರು.
ಭಾರತೀಯ ಚಿತ್ರರಂಗದಲ್ಲಿ ಹಲವು ಭಾಷೆಗಳ ಚಿತ್ರಗಳಲ್ಲೂ ಆ್ಯಮಿ ಕಾಣಿಸಿಕೊಂಡಿದ್ದಾರೆ.
ಆ್ಯಮಿ ಜಾಕ್ಸನ್ ಮತ್ತು ಅವರ ಮಾಜಿ ಗೆಳೆಯ ಜಾರ್ಜ್ ಪನಾಯಿಟೊ ಅವರಿಗೆ ಅವರಿಗೆ 6 ವರ್ಷದ ಮಗನಿದ್ದಾನೆ.