ಗುರುವಾರ , ಫೆಬ್ರವರಿ 27, 2020
19 °C

ಅನ್ನಾ ಬೆನ್: ಸುಂದರ ಕಂಗಳ ಪ್ರತಿಭಾವಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕಿ ಪ್ರಧಾನ ಮಲಯಾಳಂ ಚಿತ್ರ ‘ಹೆಲೆನ್‌’ನ ಮನೋಜ್ಞ ಅಭಿನಯದ ಮೂಲಕ ಭಾಷೆಯ ಗಡಿ ಮೀರಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಂಡಾಕೆ ಅನ್ನಾ ಬೆನ್. ಈವರೆಗೆ ನಟಿಸಿದ್ದು ಎರಡೇ ಚಿತ್ರಗಳಾದರೂ ಈ ಸುಂದರ ಕಂಗಳ ಪ್ರತಿಭಾವಂತೆ ಗಳಿಸಿದ ಹೆಸರು ದೊಡ್ಡದು.

‘ಹೆಲೆನ್‌’ನಲ್ಲಿ ಅನ್ನಾ ನಿರ್ವಹಿಸಿದ್ದು ಸವಾಲಿನ ಪಾತ್ರ. ಮಾಲ್‌ವೊಂದರ ಚಿಕನ್ ಹಬ್‌ನಲ್ಲಿ ಕೆಲಸ ಮಾಡುವ ನರ್ಸಿಂಗ್ ಪದವೀಧರೆಗೆ ಕೆನಡಾಗೆ ಹೋಗುವ ಕನಸು. ಪ್ರಿಯಕರನ ಜೊತೆಗೆ ಬೈಕ್‌ನಲ್ಲಿ ಸುತ್ತುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಬದುಕಿನ ತಿರುವು. ಅನ್ಯ ಧರ್ಮದ ಯುವಕನನ್ನು ಪ್ರೀತಿಸುತ್ತಿರುವ ಮಗಳ ಮೇಲೆ ಅಪ್ಪ ಸಾರುವ ಮೌನ ಯುದ್ಧದಲ್ಲಿ ಮಗಳ ಮನಸ್ಸು ಬಾಡಿದ ಮೊಗ್ಗು. ಈ ಗೊಂದಲದ ಸನ್ನಿವೇಶದಲ್ಲಿಯೇ ಚಿಕನ್‌ಹಬ್‌ನ ಫ್ರೀಜರ್‌ನಲ್ಲಿ ಅಚಾನಕ್ ಬಂಧಿಯಾಗುವ ಆಕೆ ನಡೆಸುವ ಜೀವ ಉಳಿಸಿಕೊಳ್ಳುವ ಹೋರಾಟ ನೋಡುಗರ ಮನಕಲಕುತ್ತದೆ.

ಅನ್ನಾ ಬೆನ್

ಮಲಯಾಳಂನ ಜನಪ್ರಿಯ ಚಿತ್ರಕಥೆ ರಚನೆಕಾರ ಬೆನ್ನಿ ಪಿ.ನಾರಯಂಬಳಂ ಮಗಳಾದರೂ ಅನ್ನಾಗೆ ಸಿನಿಮಾ ಅದೃಷ್ಟ ಅಷ್ಟು ಸುಲಭವಾಗಿ ತೆರೆದುಕೊಳ್ಳಲಿಲ್ಲ. ಆಡಿಷನ್‌ನಲ್ಲಿ ಪಾಲ್ಗೊಂಡು ನಿರ್ದೇಶಕ ಮಧು ಸಿ.ನಾರಾಯಣನ್ ಅವರೆದುರು ಸಾಮರ್ಥ್ಯ ಸಾಬೀತುಪಡಿಸಿದ ನಂತರವೇ ಮೊದಲ ಚಿತ್ರ ‘ಕುಂಬಳಾಂಗಿ ನೈಟ್ಸ್‌’ನಲ್ಲಿ ಅವಕಾಶ ದೊರೆತಿದ್ದು.

ಆಗಾಗ ಇನ್‌ಸ್ಟಾಗ್ರಾಂಗಳಲ್ಲಿ ಚಂದದ ಚಿತ್ರಗಳನ್ನು ಪೋಸ್ಟ್‌ ಮಾಡುತ್ತಾ ಅಭಿಮಾನಿಗಳ ಮನಸ್ಸು ಬೆಚ್ಚಗಾಗಿಸುವ ಅನ್ನಾ, ಈಚೆಗೆ ತಿಳಿ ಹಸಿರು ಸೀರೆಯುಟ್ಟು ಕಂಗೊಳಿಸಿದರು. ಚೌಕಟ್ಟಿಗೆ ಸಿಗದ ಹರೆಯದ ಮನಸ್ಸಿನಂಥ ಸುಂದರ ಗುಂಗುರು ಕೂದಲು ಅನ್ನಾ ಚೆಲುವಿನ ಸಿರಿಗೆ ಹೊಸ ಕಳೆ. ಎರಡೂ ಚಿತ್ರಗಳು ಇಲ್ಲಿವೆ ಕಣ್ತುಂಬಿಕೊಳ್ಳಿ.

ಅನ್ನಾ ಬೆನ್ ಸೌಂದರ್ಯಕ್ಕೆ ಗುಂಗುರು ಕೂದಲು ಭೂಷಣ

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)