ಸೋಮವಾರ, ಆಗಸ್ಟ್ 15, 2022
24 °C

ನವೆಂಬರ್‌ನಲ್ಲಿ ರಜನಿಯ ‘ಅಣ್ಣಾತೆ’ ಚಿತ್ರದ ಶೂಟಿಂಗ್‌ಗೆ ಸಿದ್ಧತೆ?

. Updated:

ಅಕ್ಷರ ಗಾತ್ರ : | |

Prajavani

‘ಸೂಪರ್‌ ಸ್ಟಾರ್’ ರಜನಿಕಾಂತ್‌ ನಟನೆಯ ‘ಅಣ್ಣಾತೆ’ ಸಿನಿಮಾದ ಶೂಟಿಂಗ್‌ ನವೆಂಬರ್‌ನಿಂದ ಶುರುವಾಗುವ ನಿರೀಕ್ಷೆಯಿದೆ. ಕೋವಿಡ್‌–19 ಪರಿಣಾಮ ಇದರ ಚಿತ್ರೀಕರಣ ಅರ್ಧಕ್ಕೆ ಸ್ಥಗಿತಗೊಂಡಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಈ ಚಿತ್ರದಲ್ಲಿ ತಲೈವನಿಗೆ ನಯನತಾರಾ ಜೋಡಿ. ಕೀರ್ತಿ ಸುರೇಶ್‌ ಅವರು ರಜನಿಯ ಪುತ್ರಿಯಾಗಿ ಬಣ್ಣ ಹಚ್ಚಿದ್ದಾರೆ. ನವೆಂಬರ್‌ನಲ್ಲಿ ಈ ಇಬ್ಬರ ನಟನೆಯ ಭಾಗದ ಚಿತ್ರೀಕರಣ ನಡೆಯಲಿದೆಯಂತೆ. ರಜನಿಕಾಂತ್‌ ಡಿಸೆಂಬರ್‌ನಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಚೆನ್ನೈನಲ್ಲಿಯೇ ಬೃಹತ್‌ ಸೆಟ್‌ ಅಳವಡಿಸಿ ಚಿತ್ರೀಕರಣ ನಡೆಸಲಾಗುತ್ತದೆಯಂತೆ.

ರಜನಿಕಾಂತ್‌ ನಟಿಸಿದ್ದ ‘ಪೆಟ್ಟಾ’ ಮತ್ತು ‘ದರ್ಬಾರ್’ ಚಿತ್ರಗಳ ನಂತರ ಬರುತ್ತಿರುವ ಸಿನಿಮಾ ಇದಾಗಿದೆ. ಈ ಎರಡೂ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತಮಟ್ಟದ ಯಶಸ್ಸು ಕಾಣಲಿಲ್ಲ. ಹಾಗಾಗಿ, ‘ಅಣ್ಣಾತೆ’ ಮೇಲೆ ರಜನಿಯ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿರುವುದು ಸಹಜ.

ಕೊರೊನಾ ಸೋಂಕು ಕಾಣಿಸಿಕೊಳ್ಳದಿದ್ದರೆ ಶೂಟಿಂಗ್‌ ಪೂರ್ಣಗೊಳಿಸಿ ಈ ವರ್ಷದ ದೀಪಾವಳಿಯಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಈಗ ವರ್ಷಾಂತ್ಯದೊಳಗೆ ಚಿತ್ರೀಕರಣ ಪೂರ್ಣಗೊಳಿಸುವುದು ಚಿತ್ರತಂಡದ ಇರಾದೆ. ಸಿರುಥೈ ಶಿವ ನಿರ್ದೇಶನದ ಈ ಸಿನಿಮಾ 2021ರ ಏಪ್ರಿಲ್‌ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಸನ್‌ ಪಿಕ್ಚರ್ಸ್‌. ಡಿ. ಇಮಾನ್‌ ಸಂಗೀತ ಸಂಯೋಜಿಸಿದ್ದಾರೆ. ಖುಷ್ಬೂ, ಮೀನಾ, ಪ್ರಕಾಶ್‌ ರಾಜ್‌, ಸೂರಿ ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು