ಶುಕ್ರವಾರ, ಫೆಬ್ರವರಿ 28, 2020
19 °C

ಅಲ್ಲು ಅರ್ಜುನ್‌ಗೆ ಆಕ್ಷನ್‌ ಕಟ್ ಹೇಳುವರೇ ತಮಿಳಿನ ಮುರುಗದಾಸ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

'ಅಲಾ ವೈಕುಂಠಪುರಮುಲೋ’ ಚಿತ್ರದ ಯಶಸ್ಸಿನ ಅಲೆಯಲ್ಲಿ ಅಲ್ಲು ಅರ್ಜುನ್‌ ತೇಲುತ್ತಿದ್ದಾರೆ. ಈಗಾಗಲೇ ನಿರ್ದೇಶಕ ಸುಕುಮಾರ್ ಅವರು ಅಲ್ಲುಗೆ ಆ್ಯಕ್ಷನ್‌ ಕಟ್‌ ಹೇಳಲು ಸಿದ್ಧವಾಗುತ್ತಿದ್ದಾರೆ. ಈ ನಡುವೆಯೇ ಎ.ಆರ್‌. ಮುರುಗದಾಸ್‌ ಅವರೂ ಸ್ಟೈಲಿಶ್‌ ಸ್ಟಾರ್‌ಗೆ ಕಥೆ ಹೇಳಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ತಮಿಳಿನ ನಿರ್ದೇಶಕ ಮುರುಗದಾಸ್‌ ಅವರು ಈ ಹಿಂದೆ ತೆಲುಗಿನ ಚಿರಂಜೀವಿ ಮತ್ತು ಮಹೇಶ್‌ ಬಾಬು ಅವರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ಈಗ ಅಲ್ಲು ಅರ್ಜುನ್‌ ಜೊತೆ ಸಿನಿಮಾ ಮಾಡುವ ಇಂಗಿತ ಹೊಂದಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಮುರುಗದಾಸ್‌ ನಿರ್ದೇಶನದ ದರ್ಬಾರ್‌ ಸೋಲು ಕಂಡಿರುವುದರಿಂದ, ಅವರೊಂದಿಗೆ ಸಿನಿಮಾ ಮಾಡಲು ಅಲ್ಲು ಅರ್ಜುನ್‌ ಒಪ್ಪುದಿಲ್ಲ ಎಂದೇ ಅನೇಕರು ಊಹಿಸಿದ್ದರು. ಆದರೆ, ಅದ್ಯಾವುದನ್ನು ಲೆಕ್ಕಿಸದ ಅಲ್ಲು, ಪೂರ್ಣ ಕಥೆ ಹೇಳುವಂತೆ ಕೇಳಿದ್ದಾರೆ.

ಕಥೆ ಇಷ್ಟವಾದರೆ, ಸುಕುಮಾರ್‌ ಅವರ ಸಿನಿಮಾ ಮುಗಿದ ನಂತರ ಮುರುಗದಾಸ್‌ ಜೊತೆ ಕೆಲಸ ಮಾಡುವುದಾಗಿಯೂ ಸ್ಟೈಲಿಶ್‌ ಸ್ಟಾರ್‌ ಭರವಸೆ ನೀಡಿದ್ದಾರೆ. ಈ ಹಿಂದೆ ನಿರ್ದೇಶಕ ಲಿಂಗುಸ್ವಾಮಿಗೂ ಇದೇ ರೀತಿಯ ಆಶ್ವಾಸನ್ನು ಅರ್ಜುನ್‌ ನೀಡಿದ್ದರು. ಆದರೆ, ಸಂಪೂರ್ಣ ಕಥೆ ಕೇಳಿದ ನಂತರ ಸ್ಕ್ರಿಪ್ಟ್‌ ಇಷ್ಟವಾಗದೆ ಸಿನಿಮಾ ಸೆಟ್ಟೇರಲಿಲ್ಲ. ಮುರುಗದಾಸ್‌ ಅವರಿಗೆ ತೆಲುಗಿನ ಈ ನಟ ಕಾಲ್‌ಶೀಟ್‌ ನೀಡುವರೇ ಎನ್ನುವುದು ಕಾದು ನೋಡಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು