ಮಂಗಳವಾರ, ಆಗಸ್ಟ್ 3, 2021
22 °C

ಯಶಸ್ಸಿನ ದಾರಿ ನಿರೀಕ್ಷೆಯಲ್ಲಿ ಅನುಷಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ. ಕೊಟಗಿ ನಿರ್ಮಿಸಿರುವ ‘ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

ಲಾಕ್ ಡೌನ್ ತೆರವಿನ‌ ನಂತರ ಚಿತ್ರೀಕರಣ ಆರಂಭಿಸಲು ಸರ್ಕಾರ ಅನುಮತಿ ನೀಡುತ್ತಿದ್ದಂತೆ, ಚಿತ್ರತಂಡ ಬಾಕಿ ಉಳಿದಿದ್ದ ಚಿತ್ರೀಕರಣದ ಕೆಲಸವನ್ನು ಪೂರ್ಣಗೊಳಿಸಿದೆ. ವಿಭಿನ್ನ ಕಥಾಹಂದರ ‌ಹೊಂದಿರುವ ಈ ಚಿತ್ರದ ಚಿತ್ರೀಕರಣೋತ್ತರ ಚಟುವಟಿಕೆಗಳು ಸದ್ಯದಲ್ಲೇ ಪ್ರಾರಂಭಿಸಲು ಚಿತ್ರ ತಂಡ ಯೋಜಿಸಿದೆ.

‘ಕೃಷ್ಣ ಗಾರ್ಮೆಂಟ್ಸ್' ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಹಫ್ತಾ’ ಚಿತ್ರದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವರ್ಧನ್ ತೀರ್ಥಹಳ್ಳಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ಶ್ರೀಮಾನ್ ಶ್ರೀಮತಿ’ ಹಾಗೂ ‘ಅವಳು ಸುಜಾತಾ’ ಧಾರಾವಾಹಿಗಳಲ್ಲಿ ನಟಿಸಿರುವ, ‘ಡಿಂಗ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅನುಷಾ ಈ ಚಿತ್ರದಲ್ಲಿ ನಾಯಕಿಯಾಗಿ ಗ್ಲಾಮರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಂಗ ಚಿತ್ರ ನೀಡಿದ ಯಶಸ್ಸಿನ ಖುಷಿಯಲ್ಲಿರುವ ಅನುಷಾ ‘ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರದ ಮೂಲಕ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

 ‘ತಿಥಿ’ ಚಿತ್ರದ ಖ್ಯಾತಿಯ ಪೂಜಾ, ಬಲ ರಾಜವಾಡಿ, ಶೀಬಾ, ಡಿ.ವಿ.ನಾಗರಾಜ್, ಸುಚಿತ್, ಅರುಣ್‌ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ ಅವರ ತಾರಾಬಳಗ ಈ ಚಿತ್ರಕ್ಕಿದೆ. ಭಗತ್ ಸಂಗೀತ ನಿರ್ದೇಶನ, ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು