ಭಾನುವಾರ, ನವೆಂಬರ್ 28, 2021
21 °C

ಸೂರ್ಯ ಹೊಳೆಯುತ್ತಿದ್ದರೆ ಪೋಸ್‌ ನೀಡಬೇಕೆನಿಸುತ್ತದೆ: ಅನುಷ್ಕಾ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಟಿ ಅನುಷ್ಕಾ ಶರ್ಮಾ ಮುಂಜಾವಿಗೆ ಮುಖವೊಡ್ಡಿ ಪೋಸ್‌ ನೀಡುತ್ತಿರುವ ಚಿತ್ರ ಅಭಿಮಾನಿಗಳ ಮನ ಗೆದ್ದಿದೆ.

ವಾರಾಂತ್ಯದ ಬಿಡುವಿನ ವೇಳೆಯನ್ನು ಸಂಭ್ರಮಿಸುತ್ತಿರುವ ಅನುಷ್ಕಾ, 'ಸೂರ್ಯ ಹೊಳೆಯುತ್ತಿರುವಾಗ, ವಾತಾವರಣ ಸಿಹಿಯಾಗಿದ್ದಾಗ ನನಗೆ ಪೋಸ್‌ ನೀಡಬೇಕು ಎಂದೆನಿಸುತ್ತದೆ. ಇಂತಹ ಪೋಸ್ಟ್‌ಗಳನ್ನು ಹಾಕಬೇಕೆನಿಸುತ್ತದೆ' ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಕಪ್ಪು ಧಿರಿಸಿನಲ್ಲಿ ಮುಗುಳ್ನಗುತ್ತಿರುವ ಫೋಟೊಗಳಿಗೆ ಬಾಬ್‌ ಮಾರ್ಲೆಯ 'ಸನ್‌ ಈಸ್‌ ಶೈನಿಂಗ್‌' ಹಾಡನ್ನು ಹಿನ್ನೆಲೆಯಾಗಿ ಸೇರಿಸಿದ್ದಾರೆ. 'ಈ ಹಾಡಿನ ಸಾಲುಗಳನ್ನು ಮರೆತು ಬಿಡಿ' ಎಂದಿರುವ ಅನುಷ್ಕಾರ ಪೋಸ್ಟ್‌ಗೆ ವಿರಾಟ್‌ ಕೊಹ್ಲಿ ಹೃದಯದ ಎಮೋಜಿಗಳ ಮೂಲಕ ಕಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಹೊಳೆಯುವ ಹಸಿರು ಬಣ್ಣದ ಈಜುಡುಗೆಯಲ್ಲಿ ಅನುಷ್ಕಾ ಶರ್ಮಾ ಅಭಿಮಾನಿಗಳನ್ನು ಸೆಳೆದಿದ್ದರು.

ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಯಾವುದೇ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಘೋಷಿಸಿಕೊಂಡಿಲ್ಲ. ಶಾರುಖ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಜೊತೆ ಝೀರೊ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಜನವರಿ 11, 2021ರಂದು ಅನುಷ್ಕಾ ಮಗಳು ವಮಿಕಾ ಕೊಹ್ಲಿಗೆ ಜನ್ಮ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು