ಭಾನುವಾರ, ಏಪ್ರಿಲ್ 11, 2021
33 °C

ಜೊತೆಗಾರನ ಫೋಟೊ ಹಂಚಿಕೊಂಡ ಅನುಷ್ಕಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಿಯೊಂದಿಗೆ ಅನುಷ್ಕಾ

ಈ ಲಾಕ್‌ಡೌನ್‌ನಲ್ಲಿ ಅನುಷ್ಕಾ ಶೆಟ್ಟಿ ತನ್ನ ಜೊತೆಗಾರನ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರಂತೆ. ಲಾಕ್‌ಡೌನ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ತನ್ನ ಜೊತೆಗಾರನೊಂದಿಗೆ ಇರುತ್ತಿದ್ದರಂತೆ ಅನುಷ್ಕಾ.

ಅನುಷ್ಕಾಳಿಗೆ ಜೊತೆಗಾರನಾ? ಸದಾ ನಟ ಪ್ರಭಾಸ್ ಜೊತೆ ಕೇಳಿ ಬರುತ್ತಿದ್ದ ಈಕೆಯ ಸುದ್ದಿ ಈಗ ಹಳಸಲಾಗಿದೆ. ಈ ಬಗ್ಗೆ ಸ್ವತಃ ಅನುಷ್ಕಾ ಅವರೇ ಸ್ಪಷ್ಟನೆ ನೀಡಿದ್ದು ನಾವಿಬ್ಬರು ಉತ್ತಮ ಸ್ನೇಹಿತರು ಎಂದಿದ್ದರು. ಹಾಗಾದರೆ ಯಾರೂ ಈ ಹೊಸ ಜೊತೆಗಾರ ಎಂದು ಯೋಚಿಸುತ್ತಿದ್ದೀರಾ. ಅದುವೇ ಅವರ ಮುದ್ದಿನ ನಾಯಿ. ಅನುಷ್ಕಾ ತಮ್ಮ ನಾಯಿ ಜೊತೆ ಈ ಲಾಕ್‌ಡೌನ್ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರಂತೆ.

ಸಮಂತಾ, ಚಾರ್ಮಿ ಹಾಗೂ ಇತರ ನಾಯಕಿಯರು ನಮ್ಮ ನೆಚ್ಚಿನ ನಾಯಿಮರಿಯೊಂದಿಗೆ ಸಮಯ ಕಳೆಯುತ್ತಿರುವ ಫೋಟೊವನ್ನು  ಹಂಚಿಕೊಂಡಿದ್ದರು. ಈಗ ಅನುಷ್ಕಾ ಕೂಡ ಈ ಸರದಿಗೆ ಸೇರಿದ್ದಾರೆ. ಇತ್ತೀಚೆಗೆ ಆಕೆ ಅನೇಕ ಬಾರಿ ನಾಯಿಯೊಂದಿಗಿರುವ ಚಿತ್ರವನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

 
 
 
 

 
 
 
 
 
 
 
 
 

😘😘

A post shared by AnushkaShetty (@anushkashettyofficial) on

ಇತ್ತೀಚೆಗೆ ಮೇಕಪ್‌ ರಹಿತ ಮುಖದೊಂದಿಗೆ ತಮ್ಮ ನಾಯಿಯೊಂದಿಗೆ ಇರುವ ಒಂದು ಪೋಟೊವನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಅನುಷ್ಕಾ. ಈ ಪೋಸ್ಟ್‌ಗೆ 3ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ನೀಡಿದ್ದಾರೆ. 

ಅನುಷ್ಕಾ ಅಭಿನಯದ ‘ನಿಶಬ್ದಂ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ಮನಸ್ಸು ಮಾಡಿದ್ದರು ನಿರ್ಮಾಪಕರು. ಆದರೆ ಅನುಷ್ಕಾ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ಸೆಪ್ಟೆಂಬರ್‌ವರೆಗೂ ಥಿಯೇಟರ್‌ಗಳು ತೆರೆಯುವುದು ಅನುಮಾನವಾಗಿದೆ. ಆ ಕಾರಣಕ್ಕೆ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಬದಲು ಒಟಿಟಿಯಲ್ಲೇ ಬಿಡುಗಡೆ ಮಾಡುವುದು ಉತ್ತಮ ಎನ್ನುವುದು ನಿರ್ಮಾಪಕ ಅಭಿಪ್ರಾಯ. ಈ ಚಿತ್ರದ ಭವಿಷ್ಯ ಏನಾಗುವುದೋ ಕಾದು ನೋಡಬೇಕು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು