ಅನೇಕ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‌ನಲ್ಲಿ ಸ್ಟಾರ್ ಪಟ್ಟಕ್ಕೇರಿದ ನಟಿ ಕನ್ನಡ ಮೂಲದ ಅನುಷ್ಕಾ ಶೆಟ್ಟಿ. ಸದಾ ಒಳ್ಳೆಯತನಕ್ಕೆ ಹೆಸರಾಗಿರುವ ಇವರ ಬಗ್ಗೆ ಟಾಲಿವುಡ್ ಸಿನಿ ಅಂಗಳದಲ್ಲಿ ಮೆಚ್ಚುಗೆಯ ಮಾತುಗಳೇ ಕೇಳಿ ಬರುತ್ತವೆ. ವಿದೇಶದಲ್ಲಿ ಟ್ಯಾಕ್ಸಿ ಡ್ರೈವರ್ ಒಬ್ಬನಿಗೆ ಅನುಷ್ಕಾ ಸಹಾಯ ಮಾಡಿದ್ದ ವಿಷಯವೂ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಹಿರಂಗಗೊಂಡಿತ್ತು. ಇದು ಅವರ ಒಳ್ಳೆತನಕ್ಕೆ ಇನ್ನೊಂದು ಗರಿ ಮೂಡುವಂತೆ ಮಾಡಿದ್ದು ಸುಳ್ಳಲ್ಲ.

ಆದರೆ ಇತ್ತೀಚಿಗೆ ಅನುಷ್ಕಾ ಬಗ್ಗೆ ಸಿಹಿಯಲ್ಲದ ಸುದ್ದಿ ಬಂದಿದೆ! ಅದೇನೆಂದರೆ ಅನುಷ್ಕಾ ಅಭಿನಯದ ‘ನಿಶಬ್ದಂ’ ಚಿತ್ರವನ್ನು ಅಮೆಜಾನ್‌ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದರು. ಆದರೆ ಅನುಷ್ಕಾ ಇದಕ್ಕೆ ಒಪ್ಪುತ್ತಿಲ್ಲ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.ಅನುಷ್ಕಾ ಕಾರಣದಿಂದ ನಿರ್ಮಾಪಕರು ತಿಂಗಳಿಗೆ ₹ 50 ಲಕ್ಷ ನಷ್ಟ ಅನುಭವಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

ಸದ್ಯದ ಲಾಕ್‌ಡೌನ್ ಪರಿಸ್ಥಿತಿ ಹಾಗೂ ಅನಿಶ್ಚಿತತೆಯ ಕಾರಣದಿಂದ ಚಿತ್ರರಂಗದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಅಲ್ಲದೇ ಲಾಕ್‌ಡೌನ್ ಸಂಪೂರ್ಣವಾಗಿ ಎಂದಿಗೆ ತೆರವುಗೊಳ್ಳುತ್ತದೆ ಎಂಬುದು ಕೂಡ ಗೊತ್ತಾಗುತ್ತಿಲ್ಲ. ಹಾಗಾಗಿ, ಚಿತ್ರದ ನಿರ್ಮಾಪಕರು ಅಮೆಜಾನ್ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದರು.

ಅಮೆಜಾನ್ ಒಪ್ಪಂದ ನಿಯಮದ ಪ್ರಕಾರ ಚಿತ್ರವನ್ನು ಖರೀದಿಸಲು ಅನುಷ್ಕಾ ಅವರ ಅನುಮತಿ ಬೇಕು. ಆದರೆ ಅದಕ್ಕೆ ಒಪ್ಪಿಗೆ ನೀಡಿ, ಆ ಮೂಲಕ ನಿರ್ಮಾಪಕರ ಹೊರೆ ಇಳಿಸಲು ಅನುಷ್ಕಾ ಸಿದ್ಧರಿಲ್ಲವಂತೆ.

ಈಗೀಗ ವೆಬ್ ಸಿರೀಸ್‌ಗಳು ಹಾಗೂ ಸಿನಿಮಾಗಳು ಆನ್‌ಲೈನ್ ಪ್ಲ್ಯಾಟ್‌ಫಾರಂನಲ್ಲಿ ಬಿಡುಗಡೆಯಾಗುವುದು ಸಾಮಾನ್ಯ. ಹಾಗಿರುವಾಗ ಅಮೆಜಾನ್ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆಯಾದರೆ ಅನುಷ್ಕಾಗೆ ಸಮಸ್ಯೆ ಏನು ಎಂಬ ಪ್ರಶ್ನೆ ಮೂಡುತ್ತಿದೆ.

ಅದರೊಂದಿಗೆ ನಿರ್ಮಾಪಕರ ಮಗ ಕೂಡ ಈ ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಬಾರದು ಎಂದು ಅನುಷ್ಕಾ ಪರವಾಗಿ ನಿಂತಿದ್ದಾರಂತೆ. ಹಾಗಿದ್ದೂ ಚಿತ್ರವನ್ನು ಅಮೆಜಾನ್‌ನಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕರು ಪಟ್ಟು ಹಿಡಿದಿರುವುದು ಯಾಕೆ ಎಂಬ ಪ್ರಶ್ನೆ ಸಂದೇಹಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.