ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ್ಯಪಲ್‌ ಕೇಕ್‌’ನಲ್ಲಿ ಮೆಲೊಡಿ ಹಾಡಿನ ಮೋಡಿ

Last Updated 30 ಸೆಪ್ಟೆಂಬರ್ 2018, 19:53 IST
ಅಕ್ಷರ ಗಾತ್ರ

ಮೆಲೊಡಿ ಹಾಡುಗಳ ಸರದಾರ ವಿ.ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯವಿರುವ ‘ಆ್ಯಪಲ್‌ ಕೇಕ್‌’ ಸಿನಿಮಾದ ‘ಓ ಗೆಳೆಯಾ ನೆನಪಿದೆಯಾ ಆ ವಿಷಯಾ’ ಗೀತೆ ಲಿರಿಕಲ್‌ ವಿಡಿಯೊ ಈಚೆಗಷ್ಟೇ ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಗೀತೆಯ ಸಾಲುಗಳಿಗೆ ಚಿತ್ರಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

‘ಆ್ಯಪಲ್‌ ಕೇಕ್‌’ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ಶ್ರೀಧರ್‌ ಕಶ್ಯಪ್‌. ಅವರು ಚಿತ್ರದ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಜತೆಗೆ, ಸಿನಿಮಾದ ಮೂರು ಹಾಡುಗಳನ್ನು ಅವರೇ ಹಾಡಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಅವುಗಳಲ್ಲಿ ‘ಆ್ಯಪಲ್‌ ಕೇಕ್‌’ ಚಿತ್ರದ ಥೀಮ್‌ ಸಾಂಗ್‌ ಒಂದಾದರೆ, ‘ಓ ಗೆಳೆಯಾ’, ‘ವಿರಾಮ ಹಾಕು’, ‘ಅದ್ಯಾವ ಗಳಿಗೆಯಲ್ಲಿ’ ಉಳಿದ ಗೀತೆಗಳು. ಎಲ್ಲ ಗೀತೆಗಳಿಗೂ ವಿ.ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯವಿದೆ. ‘ವಿರಾಮ ಹಾಕು’ ಗೀತೆಯನ್ನು ಪ್ರಮೋದ್‌ ಆಚಾರ್ಯ ಹಾಡಿದ್ದಾರೆ. ಈ ಸಾಂಗ್‌ನ ಫೀಮೇಲ್‌ ವರ್ಷನ್‌ ಅನ್ನು ಈಶಾ ಸುಚಿ ಹಾಡಿದ್ದಾರೆ.

‘ಓ ಗೆಳೆಯಾ’ ಲಿರಿಕಲ್‌ ವಿಡಿಯೊಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುತ್ತು ಪೋಣಿಸಿದಂತಿರುವ ವಿ.ನಾಗೇಂದ್ರ ಪ್ರಸಾದ್‌ ಅವರ ಪದಪುಂಜಗಳಿಗೆ ಕೇಳುಗರು ಫಿದಾ ಆಗಿದ್ದಾರೆ. ಗೀತೆಯನ್ನು ಮೆಚ್ಚಿಕೊಂಡ ಅನೇಕ ಜನರು ನನ್ನ ಫೋನ್‌ ನಂಬರ್‌ ಸಂಗ್ರಹಿಸಿ, ಪ್ರೀತಿಯಿಂದ ಮೆಸೇಜ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗೀತೆಯ ವಿಡಿಯೊ ಲಿಂಕ್‌ ಅನ್ನು ತಮ್ಮ ಆಪ್ತರ ಜತೆಗೆ ಹಂಚಿಕೊಂಡಿದ್ದಾರೆ. ಚಿತ್ರಪ್ರೇಮಿಗಳು ಕೊಡುತ್ತಿರುವ ಪ್ರೋತ್ಸಾಹ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಂಜಿತ್‌ ಕುಮಾರ್‌ ಗೌಡ.

‘ಆ್ಯಪಲ್‌ ಕೇಕ್‌’ ಸಂಪೂರ್ಣ ರಿಯಲಿಸ್ಟಿಕ್‌ ಸಿನಿಮಾ. ನಮ್ಮ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್‌, ಲವ್‌, ಸ್ನೇಹ ಹೀಗೆ ಎಲ್ಲ ಅಂಶಗಳೂ ಇವೆ. ಈ ಸಿನಿಮಾದಲ್ಲಿ ನಾವು ಯಾವುದನ್ನೂ ವೈಭವೀಕರಿಸಿ ತೋರಿಸಿಲ್ಲ. ಎಲ್ಲ ಸನ್ನಿವೇಶಗಳೂ ಸತ್ಯ ಘಟನೆಯನ್ನೇ ಆಧರಿಸಿವೆ. ರಾಜ್ಯದ ಬೇರೆ ಬೇರೆ ಭಾಗದ ನಾಲ್ಕು ಹುಡುಗರು ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳಲು ನಡೆಸುವ ಹೋರಾಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಊರು, ಸಂಸ್ಕೃತಿ, ಅಭಿರುಚಿ ಬೇರೆಬೇರೆಯಾದರೂ ಅವರ ನಡುವಿನ ಸ್ನೇಹದ ಕೊಂಡಿ ಗಟ್ಟಿಯಾಗಿರುತ್ತದೆ. ಈ ನಡುವೆ ಅವರ ಮಧ್ಯೆ ಕೆಲವೊಂದು ತಪ್ಪು ಅಭಿಪ್ರಾಯಗಳು ಬರುತ್ತವೆ. ಅದನ್ನೆಲ್ಲಾ ಬಗೆಹರಿಸಿಕೊಂಡು ಆ ಹುಡುಗರು ತಮ್ಮ ಗುರಿಯನ್ನು ಹೇಗೆ ಮುಟ್ಟುತ್ತಾರೆ ಎಂಬುದೇ ಚಿತ್ರದ ಕತೆ’ ಎನ್ನುತ್ತಾರೆ ನಿರ್ದೇಶಕರು.

‘ಆ್ಯಪಲ್‌ ಕೇಕ್‌’ ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿ, ಪಕ್ಕಾ ಪ್ರಾಕ್ಟಿಕಲ್‌ ಸಿನಿಮಾ ಮಾಡಿದ್ದೇವೆ. ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡುವುದರ ಜತೆಗೆ ಮಾನವೀಯ ಮೌಲ್ಯ ಮತ್ತು ಸಂಬಂಧಗಳ ಮಹತ್ವವನ್ನೂ ಸಾರುತ್ತದೆ ಎಂಬುದು ನಿರ್ದೇಶಕರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT