ಗುರುವಾರ , ಮೇ 26, 2022
31 °C

ರೆಹಮಾನ್ ಪುತ್ರಿ ಮದುವೆ ಸಂಭ್ರಮ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖತೀಜಾ–ರಿಯಾಸ್ದೀನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಪುತ್ರಿ ಖತೀಜಾ ರೆಹಮಾನ್ ಅವರು ಉದ್ಯಮಿ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಮದುವೆ ಸಮಾರಂಭದ ಫೋಟೊಗಳನ್ನು ಎ.ಆರ್​. ರೆಹಮಾನ್ ಹಾಗೂ ಖತೀಜಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಟ್ವಿಟರ್‌ನಲ್ಲಿ ಮಗಳ ಮದುವೆ ಫೋಟೊ ಹಂಚಿಕೊಂಡಿರುವ ಎ.ಆರ್​. ರೆಹಮಾನ್, ‘ಸರ್ವಶಕ್ತನು ದಂಪತಿಯನ್ನು ಆಶೀರ್ವದಿಸಲಿ ... ನಿಮ್ಮ ಶುಭ ಹಾರೈಕೆಗಳು ಮತ್ತು ಪ್ರೀತಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. 

ಓದಿ... ವಿವಾಹ ವಾರ್ಷಿಕೋತ್ಸವ: ಎನ್‌ಟಿಆರ್‌–ಪ್ರಶಾಂತ್‌ ನೀಲ್‌ ದಂಪತಿಗಳ ಸಂಭ್ರಮಾಚಣೆ

‘ನನ್ನ ಜೀವನದಲ್ಲಿ ಬಹು ನಿರೀಕ್ಷಿತ ದಿನ. ನನ್ನ ಹುಡುಗ ರಿಯಾಸ್ದೀನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದೇನೆ’ ಎಂದು ಖತೀಜಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಅಪ್ಪ ರೆಹಮಾನ್‌ ಅವರಂತೇ ಖತೀಜಾಗೆ ಸಂಗೀತದಲ್ಲಿ ಆಸಕ್ತಿ ಹೆಚ್ಚು. ಗಾಯನದಲ್ಲಿ ತೊಡಗಿಸಿಕೊಂಡಿರುವ ಅವರು ಬಾಲಿವುಡ್‌ ಹಾಗೂ ತಮಿಳು ಸಿನಿಮಾಗಳಲ್ಲಿ ಹಲವು ಗೀತೆಗಳನ್ನು ಹಾಡಿದ್ದಾರೆ. ಇನ್ನು ಶೇಖ್‌ ಮೊಹಮ್ಮದ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದು, ಉದ್ಯಮಿಯಾಗಿದ್ದಾರೆ. 

ರೆಹಮಾನ್​ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಲ್ಲಿ ಖತೀಜಾ ರೆಹಮಾನ್​ ಹಿರಿಯ ಮಗಳು. 

2021ರ ಡಿ.29ರಂದು ಖತೀಜಾ- ರಿಯಾಸ್ದೀನ್​ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಓದಿ... ಇಂಗ್ಲಿಷ್‌ಗೆ ಪರ್ಯಾಯ ಹಿಂದಿ: ಅಮಿತ್ ಶಾ ಹೇಳಿಕೆಗೆ ಎ.ಆರ್. ರೆಹಮಾನ್ ತಿರುಗೇಟು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು