ಸೋಮವಾರ, ಅಕ್ಟೋಬರ್ 18, 2021
25 °C

ನೀನು ಅಷ್ಟೊಂದು ಸೆಕ್ಸಿ ಹೇಗೆ? ಎಂದ ಅರ್ಜುನ್ ಕಪೂರ್‌ಗೆ ರಣವೀರ್ ಕೊಟ್ಟ ಉತ್ತರ...

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ ಈ ವಿಚಾರದಲ್ಲಿ ರಣವೀರ್ ಒಂದು ಕೈ ಮೇಲು.

ಮೂರೂವರೆ ಕೋಟಿ ಫಾಲೋವರ್ಸ್‌ಗಳನ್ನು ಹೊಂದಿರುವ ರಣವೀರ್ ಅವರು ನಿನ್ನೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳ ಜೊತೆ ಲೈವ್ ಬಂದಿದ್ದರು. ಈ ವೇಳೆ ಅವರು ‘ಏನು ಬೇಕಾದರೂ ಕೇಳಿ‘ ಎಂದು ಹೇಳಿದ್ದರು.

ಇದೇ ವೇಳೆ ದೀಪಿಕಾ ಪಡುಕೋಣೆ ಪತಿಯ ಕಾಲೆಳೆದು ‘ಮನೆಗೆ ಯಾವಾಗ ಬರ್ತಿಯಾ ಚಿನ್ನ‘? ಎಂದು ಕೇಳಿದ್ದಾರೆ. ಇದಕ್ಕೆ ಅಷ್ಟೇ ತುಂಟತನದಿಂದ ಉತ್ತರ ಕೊಟ್ಟ ರಣವೀರ್, ‘ಚಿನ್ನ ನೀನು ಬಿಸಿ ಬಿಸಿ ಅಡುಗೆ ತಯಾರಿ ಮಾಡು, ನಾನು ಇವಾಗ ಬರ್ತಾ ಇದೀನಿ‘ ಎಂದು ಹೇಳಿ ಕಿಸ್ ಇಮೋಜಿ ಕಳಿಸಿದ್ದಾರೆ.

ಅನೇಕ ಸೆಲೆಬ್ರಿಟಿಗಳು ಕೂಡ ರಣವೀರ್ ಅವರ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರಣವೀರ್‌ಗೆ ಕಾಲೆಳೆದು ಪ್ರಶ್ನೆ ಕೇಳಿದ್ದಾರೆ. ನಟ ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಪ್ರಶ್ನೆ ಕೇಳಿದ್ದಾರೆ.

‘ನೀನು ಅಷ್ಟೊಂದು ಸೆಕ್ಸಿ ಇದಿಯಾ. ಹೇಗೆ ಬಾಬಾ’ ಎಂದು ನಟ ಅರ್ಜುನ್ ಕಪೂರ್ ಕೇಳಿದ ಪ್ರಶ್ನೆಗೆ, ‘ಎಲ್ಲಾ ನೀನು ಕೊಟ್ಟ ತರಬೇತಿ ಕಣೋ’ ಎಂದು ರಣವೀರ್ ಅರ್ಜುನ್ ಕಪೂರ್‌ಗೆ ಉತ್ತರ ಕೊಟ್ಟಿದ್ದಾರೆ.

ಇನ್‌ಸ್ಟಾಗ್ರಾಂ ಬಳಕೆದಾರನೊಬ್ಬ ‘ನಿಮ್ಮ ಪತ್ನಿ ಬಗ್ಗೆ ಒಂದೇ ಒಂದು ಮಾತು ಹೇಳಬಹುದಾದರೆ? ಎಂದು ಕೇಳಿದ ಪ್ರಶ್ನೆಗೆ, ‘ಅವಳು ನನ್ನ ರಾಣಿ’ ಎಂದು ರಣವೀರ್ ಉತ್ತರಿಸಿದ್ದಾರೆ. ಹೀಗೆ ಸುಮಾರು ಅರ್ಧ ಗಂಟೆ ರಣವೀರ್ ಕೇಳುಗರ ಪ್ರಶ್ನೆಗೆ ತುಂಟತನದ ಹಾಗೂ ನೇರ ಉತ್ತರ ಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಸದ್ಯ 1983 ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಹಾಗೂ ಕಪಿಲ್ ದೇವ್ ಕುರಿತು ಕಥೆ ಹೊಂದಿರುವ ಮುಂಬರುವ ‘83‘ ಸಿನಿಮಾದಲ್ಲಿ ರಣವೀರ್ ಹಾಗೂ ದೀಪಿಕಾ ಒಟ್ಟಾಗಿ ಅಭಿನಯಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ಇದನ್ನೂ ಓದಿ: ₹22 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ ರಣವೀರ್‌–ದೀಪಿಕಾ ದಂಪತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು