ಆರ್ಯನ್‌ ಖಾನ್‌ ಫೋಟೊ ವೈರಲ್‌

ಸೋಮವಾರ, ಏಪ್ರಿಲ್ 22, 2019
29 °C

ಆರ್ಯನ್‌ ಖಾನ್‌ ಫೋಟೊ ವೈರಲ್‌

Published:
Updated:
Prajavani

ಬಾಲಿವುಡ್‌ ಬಾದ್‌ಶಾಹ ಶಾರೂಖ್‌ ಖಾನ್‌ ಮಗ ಆರ್ಯನ್‌ ಖಾನ್‌ ಸಾಮಾಜಿಕ ಜಾಲತಾಣದಲ್ಲಿ ಏನೇ ಫೊಟೊ ಅಪ್‌ಲೋಡ್‌ ಮಾಡಿದರೂ ಕ್ಷಣಾರ್ಧದಲ್ಲಿ ವೈರಲ್‌ ಆಗಿಬಿಡುತ್ತವೆ.

ಹಾಗೆ ನೋಡಿದರೆ ಆತ ತನ್ನ ಅಪ್ಪನಂತೆ ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟು ಸಕ್ರಿಯನಲ್ಲ. ಆದರೂ ಹತ್ತಿರ ಹತ್ತಿರ ಲಕ್ಷದಷ್ಟು ಅನುಯಾಯಿಗಳನ್ನು ಹೊಂದಿದ್ದಾನೆ.

ಇತ್ತೀಚಿನ ತನ್ನ ಫ್ರಾನ್ಸ್‌ ರಜಾ ದಿನಗಳ ಬಗ್ಗೆ ‘ನಾರ್ಕೊಸ್‌’ ಶೀರ್ಷಿಕೆಯಡಿ ಕೆಲವು ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದ. ನೋಡನೋಡುತ್ತಿದ್ದಂತೆ ಇವು ವೈರಲ್‌ ಆಗಿವೆ.

ತನ್ನ ಅಪ್ಪನಂತೆ ಈತನಿಗೆ ನಟನಾಗುವತ್ತ ಒಲವಿಲ್ಲ. ಅಪ್ಪನಿಗೆ ಕೇಳಿದರೆ ಹೇಳುವುದಿಷ್ಟೇ– ‘ಆತನಿಗೆ ನಟನೆಯ ಬಗ್ಗೆ ಒಲವಿಲ್ಲ. ಚಿತ್ರ ನಿರ್ಮಾಣ ಆತನಿಗೆ ಇಷ್ಟ. ನಿರ್ದೇಶಕನಾಗುವತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾನೆ. ಅದರ ಬಗ್ಗೆಯೇ ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿದ್ದಾನೆ’

ಅಂದಹಾಗೆ ಆರ್ಯನ್‌ ಖಾನ್‌ ಸದರ್ನ್‌ ಕ್ಯಾಲಿಫೋರ್ನಿಯಾದಲ್ಲಿ ಫಿಲ್ಮ್‌ ಮೇಕಿಂಗ್‌ ಬಗ್ಗೆ ಅಧ್ಯಯನ ಮಾಡುತ್ತಿದ್ದಾನೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !