ಶುಕ್ರವಾರ, ಡಿಸೆಂಬರ್ 13, 2019
24 °C

ಕಾಲಿವುಡ್‌ಗೆ ಅಟ್ಲೀ ಗುಡ್‌ಬೈ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಿಗಿಲ್‌’ ನಿರ್ದೇಶಕ ಅಟ್ಲೀ ಕುಮಾರ್‌ ಬಾಲಿವುಡ್‌ನ ಬಾದ್‌ಷಾ ಶಾರುಕ್‌ ಖಾನ್‌ ಜೊತೆ ಮೂರು ಸಿನಿಮಾಗಳ ಮಾತುಕತೆ ನಡೆಸಿದ್ದಾರಂತೆ.  ತಮಿಳಿನ ಈ ಜನಪ್ರಿಯ ನಿರ್ದೇಶಕ ಕಾಲಿವುಡ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂಬ ಗುಲ್ಲು ಎದ್ದಿದೆ.

ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದ ಸಿನಿಮಾಗಳ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.  ಬಾಲಿವುಡ್‌ ಪಾದಾರ್ಪಣೆ ಮಾಡಲು ಈ ನಿರ್ದೇಶಕ ಕಾಯುತ್ತಿದ್ದು, ಇವರು ಬಾಲಿವುಡ್‌ನಲ್ಲಿಯೇ ನೆಲೆಯೂರಲಿದ್ದಾರೆ ಎಂಬ ಗಾಳಿಸುದ್ದಿಗಳು ಕೇಳಿಬರುತ್ತಿವೆ.

ಶಾರುಕ್‌ ಖಾನ್‌ ಅವರ ಮುಂದಿನ ಬಹುನಿರೀಕ್ಷಿತ ಚಿತ್ರವನ್ನು ಅಟ್ಲೀಕುಮಾರ್‌ ನಿರ್ದೆಶೀಸುತ್ತಿದ್ದಾರೆ. ಬರೀ ಇದೊಂದೇ ಸಿನಿಮಾವಲ್ಲ, ಶಾರುಕ್‌ ಖಾನ್‌ ಅವರ ಪ್ರೊಡಕ್ಷನ್‌ ಹೌಸ್‌ ರೆಡ್‌ ಚಿಲ್ಲೀಸ್‌ನ ಮುಂದಿನ ಮೂರು ಸಿನಿಮಾಗಳನ್ನು ಅಟ್ಲೀಕುಮಾರ್‌ ನಿರ್ದೇಶನ ಮಾಡಲಿದ್ದಾರೆ. ಮೊದಲ ಸಿನಿಮಾದ ಶೂಟಿಂಗ್‌ ಡಿಸೆಂಬರ್‌ ತಿಂಗಳಲ್ಲಿ ಆರಂಭವಾಗಲಿದ್ದು, ಈ ಚಿತ್ರಕ್ಕೆ ‘ಸಂಕಿ’ ಎಂದು ಹೆಸರಿಡಲಾಗಿದೆ.

ಮೂರು ಸಿನಿಮಾಕ್ಕೂ ಶಾರುಕ್‌ ನಾಯಕ?

ರೆಡ್‌ ಚಿಲ್ಲೀಸ್‌ನ ಮುಂದಿನ ಮೂರು ಸಿನಿಮಾಗಳ ನಾಯಕ ನಟ ಶಾರುಕ್‌ ಖಾನ್‌ ಅಥವಾ ಬೇರೆಯವರಾ ಎಂದು ಇನ್ನೂ
ಗೊತ್ತಾಗಿಲ್ಲ. ಆದರೆ ಈ ಸಿನಿಮಾಗಳ ನಿರ್ದೇಶನದ ಜವಾಬ್ದಾರಿ ಅಟ್ಲಿಕುಮಾರ್‌ರವರದ್ದೇ ಎಂಬ ಬಲವಾದ ಮಾತು ಕೇಳಿಬಂದಿರುವುದರಿಂದ ಅಟ್ಲೀಕುಮಾರ್‌ ಇನ್ನು ಕೆಲ ವರ್ಷ ಬಾಲಿವುಡ್‌ನಲ್ಲಿ ಬ್ಯುಸಿಯಾಗುತ್ತಾರೆ ಎಂಬುದಂತೂ ಸತ್ಯ.

ಚಿತ್ರದ ಹೆಸರು ವಿವಾದ?

‘ಸಂಕಿ’ ಚಿತ್ರದ ಶೀರ್ಷಿಕೆಯೇ ಈಗ ವಿವಾದಕ್ಕೀಡಾಗಿದೆ. ನಿರ್ದೇಶಕ ಸಾಜಿದ್‌ ನಾಡಿಯಾವಾಲ ಅವರು ಈ ಹೆಸರನ್ನು ಫಿಲ್ಮ್‌ ಚೇಂಬರ್‌ನಲ್ಲಿ ರಿಜಿಸ್ಟ್ರಾರ್‌ ಮಾಡಿಸಿದ್ದಾರೆ. ಸಲ್ಮಾನ್‌ ಖಾನ್‌ ಕೂಡ ತಮ್ಮ ಮುಂದಿನ ಚಿತ್ರಕ್ಕೆ ಈ ಹೆಸರನ್ನು ಇಡಲು ಇಷ್ಟಪಟ್ಟಿದ್ದರಂತೆ. ಸಾಜಿದ್‌ ನಾಡಿಯಾವಾಲ ಅವರ ‘ಸಂಕಿ’ ಹೆಸರಿನ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಶೂಟಿಂಗ್‌ಗೆ ತಯಾರಿ ಮಾಡಿಕೊಂಡಿದ್ದಾರಂತೆ. ಹಾಗಾಗಿ ಶಾರುಕ್‌ ಈ ವಿಚಾರದ ಬಗ್ಗೆ ಸಾಜಿದ್‌ ಜೊತೆ ಮಾತುಕತೆ ನಡೆಸಲಿದ್ದು, ತಮ್ಮ ಮುಂದಿನ ಚಿತ್ರಕ್ಕೆ ‘ಸಂಕಿ’ ಎಂದು ಹೆಸರಿಡುವ ಬಗ್ಗೆ ನೋ ಅಬ್ಜೆಕ್ಷನ್‌ ಪ್ರಮಾಣ ಪತ್ರ ಪಡೆಯಲು ತೀರ್ಮಾನಿಸಿದ್ದಾರೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು