ಭಾನುವಾರ, ಆಗಸ್ಟ್ 1, 2021
22 °C

ಹೊಸ ದಾಖಲೆ ಬರೆದ ‘ಏನಮ್ಮಿ ಏನಮ್ಮಿ’ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ನಟನೆಯ ‘ಅಯೋಗ್ಯ’ ಸಿನಿಮಾದ ಪ್ರೇಮಗೀತೆ ‘ಏನಮ್ಮಿ ಏನಮ್ಮಿ’ ಹೊಸ ದಾಖಲೆ ಬರೆದಿದೆ.

ಈ ಹಾಡಿನ ಲಿರಿಕಲ್‌ ವಿಡಿಯೊ ಮತ್ತು ಎಚ್‌ಡಿ ವಿಡಿಯೋ ವೀಕ್ಷಿಸಿದವರ ಸಂಖ್ಯೆ ಒಟ್ಟು 13 ಕೋಟಿ ದಾಟಿದೆ. ಈ ಸಿನಿಮಾ 2018ರ ಆಗಸ್ಟ್‌‌ನಲ್ಲಿ ಬಿಡುಗಡೆಯಾಗಿತ್ತು. ನಿರ್ದೇಶಕ ಮಹೇಶ್‌ ಕುಮಾರ್‌ ಅವರ ಮೊದಲ ನಿರ್ದೇಶನದ ಚಿತ್ರವಿದು. ಈ ಹಾಡಿನ ಸಾಹಿತ್ಯ ಬಹದ್ದೂರ್‌ ಖ್ಯಾತಿಯ ಚೇತನ್‌ ಕುಮಾರ್‌ ಅವರದು. ಸಂಗೀತ ನಿರ್ದೇಶನ ಅರ್ಜುನ್‌ ಜನ್ಯ ಅವರದು. ಟಿ.ಆರ್‌. ಚಂದ್ರಶೇಖರ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು.

‘ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಸೇರಿ ದೇಶದ ಹಲವು ಭಾಷಿಗರು ಈ ಹಾಡನ್ನು ಯೂಟ್ಯೂಬ್‌ನಲ್ಲಿ ನೋಡಿದ್ದಾರೆ. 10 ಸಾವಿರ ಮಂದಿ ಈ ಹಾಡಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎರಡು ವರ್ಷ ತುಂಬುವುದರೊಳಗೆ ನಮ್ಮ ಚಿತ್ರದ ಹಾಡೊಂದು ಹೊಸ ದಾಖಲೆ ಬರೆದಿರುವುದು ಖುಷಿ ನೀಡಿದೆ’ ಎನ್ನುತ್ತಾರೆ. ಈ ಖುಷಿಯ ಸುದ್ದಿಯನ್ನು ಅವರು ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 

ಶರಣ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ‘ರ‍್ಯಾಂಬೊ 2’ ಚಿತ್ರದ ‘ಚುಟು ಚುಟು’ ಹಾಡಿನ ವೀಕ್ಷಕರ ಸಂಖ್ಯೆಯೂ 10 ಕೋಟಿ ದಾಟಿದೆ. ಇನ್ನು ಬಿಡುಗಡೆಗೆ ಸಜ್ಜಾಗಿರುವ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ‘ಖರಾಬು’ ಹಾಡು ವೀಕ್ಷಿಸಿದವರ ಸಂಖ್ಯೆ 8 ಕೋಟಿ ದಾಟಿದೆ.

 

ಏನಮ್ಮಿ ಏನಮ್ಮಿ ಹಾಡು ಕೇಳಲು https://youtu.be/EIQ2Rpnhvt0/ https://youtu.be/chLTOMbgLO0 ಲಿಂಕ್‌ ನೋಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು