ಶನಿವಾರ, ಮೇ 8, 2021
18 °C

‘ಬೀಸೋ ಗಾಳಿ’ ಹಾಡು ಬಿಡುಗಡೆ 16ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕರಾವಳಿಯ ಪ್ರತಿಭೆಗಳು ಒಗ್ಗೂಡಿ ‘ಬೀಸೋ ಗಾಳಿ’ ಎಂಬ ಹಾಡು ರಚನೆ ಮಾಡಲಾಗಿದ್ದು, ಏ.16ರಂದು ಸಂಜೆ 5 ಗಂಟೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹಾಡಿನ ಗಾಯಕ ಹಾಗೂ ನಿರ್ಮಾಪಕ ಡಾ.ಅಭಿಷೇಕ್‌ ರಾವ್ ಕೊರಡಕಲ್‌ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೀಸೋ ಗಾಳಿ’ ಹಾಡಿಗೆ ಕೆಜಿಎಫ್‌ ಖ್ಯಾತಿಯ ಐರಾ ಆಚಾರ್ಯ ಕೂಡ ಧ್ವನಿಯಾಗಿದ್ದು, ಗಮ್ಜಾಲ್‌, ಗಿರಿಗಿಟ್‌ ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿರುವ ಡರೆಲ್‌ ಮಸ್ಕರೇನಸ್‌ ಹಾಡಿನ ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ಮಾಡಿದ್ದಾರೆ ಎಂದು ತಿಳಿಸಿದರು.

ಹಾಡಿನ ವಿಡಿಯೋ ಚಿತ್ರೀಕರಣವನ್ನು ತಂಗಾಳಿ ರೆಸಾರ್ಟ್‌ನಲ್ಲಿ ಮಾಡಲಾಗಿದ್ದು, ಸಂಪ್ರೀತಿ ಆಳ್ವ ನಿರ್ದೇಶನದಲ್ಲಿ ಸುಂದರವಾಗಿ ಮೂಡಿಬಂದಿದೆ. ಸ್ಯಾಂಡಲ್‌ವುಡ್ ನಟ ಅವಿನಾಶ್‌ ಶೆಟ್ಟಿ ಹಾಗೂ ಮಾಡೆಲ್‌ ದೀಕ್ಷಾ ಸಾಲಿಯನ್ ಹಾಡಿನಲ್ಲಿ ಅಭಿನಯಿಸಿದ್ದಾರೆ ಎಂದರು.

ವೃತ್ತಿಯಲ್ಲಿ ಕೆಎಂಸಿಯಲ್ಲಿ ವೈದ್ಯನಾಗಿದ್ದು, ಈಗಾಗಲೇ ಹಲವು ಚಿತ್ರಗಳಿಗೆ ಹಿನ್ನಲೆ ಗಾಯಕನಾಗಿದ್ದೇನೆ. ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಶುಕ್ರವಾರ ಸಂಜೆ 5ಗಂಟೆಗೆ ‘ಅಭಿಷೇಕ್‌ ಕೊರಡಕಲ್‌’ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡು ಬಿಡುಗಡೆಯಾಗಲಿದ್ದು, ಪ್ರೋತ್ಸಾಹ ನೀಡಬೇಕು.‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.