ಮಂಗಳವಾರ, ಏಪ್ರಿಲ್ 20, 2021
29 °C

ಬೆಲ್‌ಬಾಟಂ 2 ಚಿತ್ರದ ಟೈಟಲ್‌ ಪೋಸ್ಟರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸ್ಯಮಯ, ಪತ್ತೆದಾರಿ ಕಥೆ ಹೊಂದಿರುವ ಬೆಲ್‌ಬಾಟಂ 2 ಚಿತ್ರದ ಶೀರ್ಷಿಕೆ ಪೋಸ್ಟರ್‌ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ತಾನ್ಯ ಹೋಪ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಇದು 2019ರಲ್ಲಿ ಬಿಡುಗಡೆಯಾದ ಬೆಲ್‌ ಬಾಟಂ ಚಿತ್ರದ ಸೀಕ್ವೆಲ್ ಆಗಿದೆ. ಬೆಲ್‌ಬಾಟಂ ಬಾಕ್ಸ್‌ ಆಫೀಸಿನಲ್ಲಿ ಹೆಚ್ಚು ಸದ್ದು ಮಾಡಿದ ಚಿತ್ರವಾಗಿತ್ತು. ಈ ಚಿತ್ರಕ್ಕೆ ಜಯತೀರ್ಥ ನಿರ್ದೇಶನವಿದೆ. ಚಿತ್ರಕ್ಕೆ ಡಿಕ್ಟೆಟಿವ್ ದಿವಾಕರ ಎಂಬ ಟ್ಯಾಗ್‌ಲೈನ್ ಇರಿಸಲಾಗಿದೆ.

ಡಿಕ್ಟೆಟಿವ್ ದಿವಾಕರ್ ಪಾತ್ರದಲ್ಲಿ ರಿಷಭ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಟೈಟಲ್ ಪೋಸ್ಟರ್ ಮೂಲಕವೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ ಚಿತ್ರತಂಡ. ಈ ಚಿತ್ರದಲ್ಲಿ ಇನ್ನಷ್ಟು ಟ್ವಿಸ್ಟ್ ಹಾಗೂ ಕುತೂಹಲಗಳು ಇರಲಿವೆ ಎಂದಿದ್ದಾರೆ ಜಯತೀರ್ಥ. 1980ರ ದಶಕಕ್ಕೆ ಹೊಂದುವಂತೆ ಚಿತ್ರೀಕರಣ ಮಾಡಲಾಗುತ್ತದೆ. ಮೈಸೂರು, ಚಾಮರಾಜನಗರ ಹಾಗೂ ಉತ್ತರಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ.

ನಟ ಪ್ರಮೋದ್ ಶೆಟ್ಟಿ, ಯೋಗರಾಜ್ ಭಟ್‌, ಪಿ.ಪಿ. ಸತೀಶ್‌ಚಂದ್ರ, ಹರಿಪ್ರಿಯಾ ಹಾಗೂ ಸುಜಯ್ ಶಾಸ್ತ್ರಿ ಪ್ರಮುಖಪಾತ್ರಗಳಲ್ಲಿ ನಟಿಸಲಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಅರವಿಂದ ಕಶ್ಯಪ್ ಸಿನಿಮಾಟೊಗ್ರಫಿಯಿದೆ.

ಪ್ರಸ್ತುತಪಡಿಸುತ್ತಿದ್ದೇವೆ 'ಬೆಲ್ ಬಾಟಮ್ 2' (The curious case of ಚೆಂಡೂವ). Detective ದಿವಾಕರ ಮತ್ತೆ ಬರಲಿದ್ದಾನೆ.

Presenting the Title of BELL BOTTOM 2 (The curious case of CHENDOOVA). Adventures of Detective Diwakar continues. @jayathirtha77 @HariPrriya6 @TanyaHope_offl @AJANEESHB pic.twitter.com/7Qf5uZ5CB0

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು