ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಿನಿಮಾ: ನೀರಿನ ಬವಣೆ ನೀಗಲು ‘ಬೆಟ್ಟದ ದಾರಿ’

Last Updated 22 ಫೆಬ್ರುವರಿ 2022, 7:51 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಕೆಲವು ಭಾಗಗಳ ನೀರಿನ ಸಮಸ್ಯೆಯ ಕಥೆ ಹೇಳಲು ಹೊರಟಿದೆ ‘ಬೆಟ್ಟದ ದಾರಿ’ ಹೆಸರಿನಮಕ್ಕಳ ಸಿನಿಮಾ.

‘ಬರಪೀಡಿತ ಊರೊಂದರಲ್ಲಿ ನೀರು ಸಿಗದೆ ಪರದಾಡುವ ಜನ, ಪರಿಹಾರ ನೀಡದ ರಾಜಕೀಯ ವ್ಯವಸ್ಥೆ, ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡು ಚಾಣಾಕ್ಷತನದಿಂದ ಇದಕ್ಕೆ ಪರಿಹಾರ ಕಂಡುಹಿಯುತ್ತಾರೆ. ಚಿಣ್ಣರು ಇದನ್ನು ಹೇಗೆ ನಿಭಾಯಿಸುತ್ತಾರೆ’ ಎಂಬುದು ಒಂದು ಎಳೆಯ ಸಾರಾಂಶ.

ರಚನೆ, ಚಿತ್ರಕತೆ, ಸಂಭಾಷಣೆ ಬರೆದಿರುವ ಮಾ.ಚಂದ್ರು ಆಕ್ಷನ್ ಕಟ್ ಹೇಳಿದ್ದಾರೆ. ‘ಮೂಕಹಕ್ಕಿ’ ನಿರ್ಮಾಣ ಮಾಡಿದ್ದ ಚಂದ್ರಕಲಾ ಟಿ.ಆರ್. ಸಹೋದರ ಮಂಜುನಾಥ್ ಎಚ್‌.ನಾಯಕ್ ಅವರೊಂದಿಗೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಮಾ.ನಿಶಾಂತ್ ಟಿ.ರಾಠೋಡ್, ಅಲೋಕ್, ವಿಘ್ನೇಶ್‌ ಭರಮಸಾಗರ, ಸೋಮನಾಥ, ಶಾಶ್ವತಿ ಸೇರಿದಂತೆ ಹದಿನಾಲ್ಕು ಮಕ್ಕಳು ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ರಮೇಶ್‌ಭಟ್, ಬ್ಯಾಂಕ್‌ ಜನಾರ್ದನ್‌, ಉಮೇಶ್, ಮೈಸೂರು ಮಲ್ಲೇಶ್, ರಿಕ್ಕಿ, ಮಂಜುಳಾರೆಡ್ಡಿ, ಅಂಜಲಿ, ಆನಂದ್ ನಟಿಸಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಮತ್ತು ಪತ್ರಕರ್ತ ವಿಜಯಭರಮಸಾಗರ ವಿರಚಿತ ಒಟ್ಟು ನಾಲ್ಕು ಗೀತೆಗಳಿಗೆ ವೀರ್‌ಸಮರ್ಥ್ ಸಂಗೀತ ಸಂಯೋಜನೆ ಇದೆ. ಛಾಯಾಗ್ರಹಣ ನಂದಕುಮಾರ್, ಸಂಕಲನ ಅರ್ಜುನ್, ನೃತ್ಯ ಕಂಬಿರಾಜ್ ಅವರದಾಗಿದೆ. ಬಿಜಾಪುರ, ಕುಂದಾಪುರದ ಕಮಲಶಿಲೆ ಗುಹೆಯಲ್ಲಿ ಒಟ್ಟು 32 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಪೋಸ್ಟರ್‌, ಟ್ರೇಲರ್‌ ಬಿಡುಗಡೆಯಾಗಿದೆ.

ಪ್ರಚಾರದ ಸಲುವಾಗಿ ಚಿತ್ರದ ಮೋಷನ್ ಪೋಸ್ಟರ್, ಟ್ರೇಲರ್‌ ಬಿಡುಗಡೆಯಾಗಿದೆ. ಹೀರಾಲಾಲ್ ಮೂವೀಸ್ ಮುಖಾಂತರ ಸಿದ್ಧಗೊಂಡಿರುವ ಸಿನಿಮಾವನ್ನು ವಿಜಯ್‌ ವಿತರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT