ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರನ್‌ ಮೋಹನ್‌ ಜೂದನ್‌!

Last Updated 18 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಭದ್ರನ್‌ 15 ವರ್ಷಗಳ ಬಳಿಕ ಒಂದು ಮೋಷನ್‌ ಪೋಸ್ಟರ್‌ನೊಂದಿಗೆ ತಮ್ಮ ಅಭಿಮಾನಿಗಳಿಗೆ ಹಾಯ್‌ ಹೇಳಿದ್ದಾರೆ. 2005ರಲ್ಲಿ ‘ಉದಯನ್‌’ ಬಳಿಕ ಹಿನ್ನೆಲೆಗೆ ಸರಿದಿದ್ದ ಭದ್ರನ್‌ ಮತ್ತೊಮ್ಮೆ ನಿರ್ದೇಶಕರ ಕ್ಯಾಪ್‌ ಧರಿಸಲು ಸಜ್ಜಾಗಿದ್ದಾರೆ.

ಮತ್ತೊಂದು ಗಮನಾರ್ಹ ಅಂಶವೆಂದರೆ, ‘ಉದಯನ್‌’ನ ನಾಯಕನಟ ಮೋಹನ್‌ಲಾಲ್‌ ಅವರೇ ಭದ್ರನ್‌ ಹೊಸ ಚಿತ್ರಕ್ಕೂ ನಾಯಕ! ಶೀರ್ಷಿಕೆ ‘ಜೂದನ್‌’.

ಮೋಷನ್‌‍ಪೋಸ್ಟರ್‌ ನೋಡಿದವರು ಥ್ರಿಲ್‌ ಆಗಿದ್ದಾರೆ. ದಷ್ಟಪುಷ್ಟ ಹೋರಿಯ ಎರಡು ಕೋಡುಗಳ ಮಧ್ಯೆ ಪುಟಾಣಿ ಮಗುವೊಂದು ನಗುನಗುತ್ತಾ ಮಲಗಿರುವ ದೃಶ್ಯ ಅದರಲ್ಲಿದೆ. ಮೋಷನ್‌ ಪೋಸ್ಟರ್‌ ತೆರೆಯುತ್ತಲೇ ಇಂಗ್ಲಿಷ್‌ ಆಕರ್ಷಕ ಹಾಡೊಂದು ಕಿವಿ ತುಂಬಿಕೊಳ್ಳುತ್ತದೆ.

ತಾರಾಗಣದಲ್ಲಿ ಸೋಬಿನ್‌ ಶಾಹಿರ್‌ ಮತ್ತು ಜೋಜು ಜಾರ್ಜ್‌ ಇದ್ದು, ರೀಮಾ ಕಲ್ಲಿಂಗಳ್‌ ಮೋಹನ್‌ಲಾಲ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ. ಎಸ್.ಸುರೇಶ್‌ಬಾಬು ‘ಜೂದನ್‌’ಗೆ ಚಿತ್ರಕತೆ ಬರೆದಿದ್ದಾರೆ.

ನಿರ್ದೇಶಕರಾಗುವ ಮುನ್ನ ಭದ್ರನ್‌ ನಟನೆಯ ಪಟ್ಟುಗಳನ್ನು ತೆರೆಯಲ್ಲಿ ತೋರಿಸಿ ಗೆದ್ದವರು ಭದ್ರನ್‌. ನಿರ್ದೇಶಕರಾಗಿ ಅವರ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದ ಚಿತ್ರಗಳು ‘ಸ್ಫಟಿಕಂ’, ‘ಅಂಕಲ್‌ ಬನ್‌’ ಮತ್ತು ‘ಒಲಿಂಪಿಯನ್ ಅಂಥೋಣಿ ಆ್ಯಡಂ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT