ಮಂಗಳವಾರ, ಆಗಸ್ಟ್ 3, 2021
21 °C

ಹ್ಯಾಟ್ರಿಕ್ ಹೀರೊ ಶಿವಣ್ಣನ ಹುಟ್ಟುಹಬ್ಬಕ್ಕೆ‘ಭಜರಂಗಿ 2‘ ಟೀಸರ್‌ ಉಡುಗೊರೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್‌ಗೆ ಭಾನುವಾರ 58ನೇ ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟು ಹಬ್ಬಕ್ಕೆ ‘ಭಜರಂಗಿ–2‘ ಚಿತ್ರತಂಡ ಅದ್ಧೂರಿ ಟೀಸರ್‌ ಬಿಡುಗಡೆ ಮಾಡುವ ಮೂಲಕ, ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಇತ್ತ ಹುಟ್ಟುಹಬ್ಬಕ್ಕೆ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿರುವುದರಿಂದ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ನಿರ್ದೇಶಕ ಎ ಹರ್ಷ – ಶಿವರಾಜ್‌ಕುಮಾರ್ ಕಾಂಬಿನೇಷನಲ್ಲಿ, ನಿರ್ಮಾಪಕ ಜಯಣ್ಣ–ಭೋಗೇಂದ್ರ ನಿರ್ಮಿಸುತ್ತಿರುವ ‘ಭಜರಂಗಿ 2’ ಸಿನಿಮಾದ 2 ನಿಮಿಷದ ಟೀಸರ್ ಅನ್ನು ಎ2 ಮ್ಯೂಸಿಕ್ ಚಾನೆಲ್ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದೆ. ಟೀಸರ್‌ ಬಿಡುಗಡೆಯಾದ ನಾಲ್ಕು ಗಂಟೆಯಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಅದ್ಧೂರಿ ಸೆಟ್‌, ಅಷ್ಟೇ ವಿಶಿಷ್ಟವಾದ ಕಾಸ್ಟ್ಯೂಮ್‌ ಧರಿಸಿರುವ ಪಾತ್ರಧಾರಿಗಳು ಟೀಸರ್‌ನಲ್ಲಿ ಗಮನ ಸೆಳೆಯುತ್ತಾರೆ. ನಟಿಯರಾದ ಶ್ರುತಿ, ಭಾವನಾ ವಿಶಿಷ್ಟ ವೇಷಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ವೈದ್ಯೋ ನಾರಾಯಣೋ ಹರಿಃ ... ಈ ಭೂಮಿ ಮೇಲೆ ಅದೆಷ್ಟೋ ಜೀವಿಗಳನ್ನು ಸೃಷ್ಟಿಸಿದ ಭಗವಂತ ಮನುಷ್ಯನಿಗೆ ಮಾತ್ರ ಎಲ್ಲ ಸೌಲಭ್ಯಗಳನ್ನು ಕೊಟ್ಟನು. ಕಾಲ ಕ್ರಮೇಣ ಅದು ಹೆಚ್ಚಾದಂತೆ ರೋಗ ರುಜಿನಗಳು ಹೆಚ್ಚಾದವು. ಮನುಷ್ಯನ ಮೇಲಿದ್ದ ಅಗಾಧ ಪ್ರೀತಿಯಿಂದ ಈ ರೋಗಗಳಿಗೆ ಪರಿಹಾರವನ್ನು ಈ ಪ್ರಕೃತಿಯಲ್ಲೇ ಇಟ್ಟನು...‘ ಹೀಗೆ ಡೈಲಾಗ್‌ನೊಂದಿಗೆ ಟೀಸರ್‌ ಆರಂಭವಾಗುತ್ತದೆ. ಭಜರೆ.. ಭಜರೆ.. ಭಜ ಭಜ ಭಜರಂಗಿ.. ಹಾಡಿನ ಸಾಲಿನಿಂದ ಟೀಸರ್‌ ಪೂರ್ಣಗೊಳ್ಳುತ್ತದೆ.

ಇತ್ತೀಚೆಗಷ್ಟೇ ಭಜರಂಗಿ 2 ಸಿನಿಮಾದ ಟೀಸರ್‌ ಬಿಡುಗಡೆ ಮಾಡುವ ಕುರಿತು ಚಿತ್ರ ತಂಡದ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು