ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಗಸ್ಟ್‌ 9ಕ್ಕೆ ದುನಿಯಾ ವಿಜಯ್‌ ನಟನೆಯ ‘ಭೀಮ’ ಚಿತ್ರ ಬಿಡುಗಡೆ

Published 18 ಜೂನ್ 2024, 10:23 IST
Last Updated 18 ಜೂನ್ 2024, 10:23 IST
ಅಕ್ಷರ ಗಾತ್ರ

ನಟ ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ ‘ಭೀಮ’ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿನಿಮಾವನ್ನು ಆಗಸ್ಟ್‌ 9ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 

ಆಗಸ್ಟ್‌ 15 ರಂದು ಬಿಡುಗಡೆಯಾಗಬೇಕಿದ್ದ ತೆಲುಗಿನ ‘ಪುಷ್ಪ–2’ ಮುಂದೂಡಿಕೆಯಾಗಿದ್ದು, ಈ ಅವಧಿಯಲ್ಲೇ ‘ಭೀಮ’ ತೆರೆಗೆ ಬರುವ ಸಾಧ್ಯತೆ ಇದೆ. 2022ರ ಫೆಬ್ರುವರಿ 24ರಂದು ವಿಜಯ್‌ ತಮ್ಮ 28ನೇ ಸಿನಿಮಾ ‘ಭೀಮ’ ಘೋಷಿಸಿದ್ದರು. 2022 ಏ.18ಕ್ಕೆ ಈ ಸಿನಿಮಾದ ಮುಹೂರ್ತ ನಡೆದಿತ್ತು. ಇದಾಗಿ ಎರಡು ವರ್ಷದ ಬಳಿಕ ಸಿನಿಮಾ ಬಿಡುಗಡೆಯಾಗುತ್ತಿದೆ. 

ಚಿತ್ರದಲ್ಲಿ ಭೀಮನಿಗೆ ಜೋಡಿಯಾಗಿ ಅಶ್ವಿನಿ ನಟಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಕಲ್ಯಾಣಿ ಮತ್ತಿತರರು ಅಭಿನಯಿಸಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದ್ದು, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT