ಕರಣ್ ಜೋಹರ್ ಅವರ ಮುಂದಿನ ಸಿನಿಮಾವು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್‌ನ (ರಾ) ಸ್ಥಾಪಕ ರಾಮೇಶ್ವರ್ ನಾಥ್ ಕಾವ್ ಜೀವನಕತೆ ಕುರಿತಾಗಿದೆ. ಈ ಸಿನಿಮಾವು ನಿತಿನ್ ಎ. ಗೋಖಲೆ ಬರೆದ ‘ಆರ್.ಎನ್. ಕಾವ್: ಜೆಂಟಲ್‌ಮ್ಯಾನ್ ಸ್ಪೈಮಾಸ್ಟರ್’ ಕೃತಿ ಆಧಾರಿತವಾಗಿದೆ.

ಹೊಸ ಥ್ರಿಲ್ಲರ್ ಕತೆಯಾಧಾರಿತ ಸಿನಿಮಾಕ್ಕೆ ನಿರ್ದೇಶಕ ಕರಣ್ ಜೋಹರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ಮತ್ತೊಮ್ಮೆ ಥ್ರಿಲ್ಲರ್ ಸಿನಿಮಾ ಮಾಡುತ್ತಿದ್ದೇನೆ. ನಿತಿನ್ ಗೋಖಲೆ ಅವರ ಕೃತಿಯನ್ನು ಬೆಳ್ಳಿತೆರೆಗೆ ತರುತ್ತಿದ್ದೇನೆ. ಹೆಚ್ಚಿನ ಮಾಹಿತಿ ಸದ್ಯದಲ್ಲೇ ಸಿಗಲಿದೆ’ ಎಂದು ಹೇಳಿದ್ದಾರೆ.

ಇದರಲ್ಲಿ ಆರ್.ಎನ್. ಕಾವ್ ಅವರ ಜೀವನದ ಬಗ್ಗೆ ಎಲ್ಲರಿಗೂ ಗೊತ್ತಿರದ ಅನೇಕ ಸಂಗತಿಗಳು ಈ ಸಿನಿಮಾದಲ್ಲಿರುತ್ತವೆ ಎಂದು ಚಿತ್ರದ ಮೂಲಗಳು ಹೇಳಿವೆ.

‘ರಾ’ ಮೊದಲ ಗುಪ್ತಚರ ಸಂಸ್ಥೆಯಾಗಿದೆ. ಇದನ್ನು 1968ರಲ್ಲಿ ಆರ್. ಎನ್. ಕಾವ್ ಆರಂಭಿಸಿದರು. ಭಯೋತ್ಪಾದನಾ ಚಟುವಟಿಕೆಗಳನ್ನು ಪತ್ತೆಹಚ್ಚಿ, ದೇಶದ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಸಲಹೆ ನೀಡುವುದು ರಾ ಪ್ರಮುಖ ಕಾರ್ಯಗಳು. ಇದರ ಮುಖ್ಯ ಕಚೇರಿ ನವದೆಹಲಿಯಲ್ಲಿದೆ. ಈ ಸಂಸ್ಥೆಯು ಪ್ರಧಾನಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವೆಲ್ಲವೂ ಸಿನಿಮಾದಲ್ಲಿರಲಿದೆ. ಸಿನಿಮಾದ ಪಾತ್ರವರ್ಗದ ಬಗ್ಗೆ ಮಾಹಿತಿ ತಿಳಿಯಬೇಕಿದೆ.

ಕರಣ್ ಜೋಹರ್ ಅವರ ಈ ಹಿಂದಿನ ಸ್ಪೈ ಥ್ರಿಲ್ಲರ್ ಕತೆಯನ್ನೊಳಗೊಂಡ ‘ರಾಝಿ’ ಸಿನಿಮಾವು ಭಾರಿ ಯಶಸ್ಸು ಗಳಿಸಿತ್ತು. ಈ ಚಿತ್ರ 2018ರಲ್ಲಿ ಬಿಡುಗಡೆಯಾಗಿದ್ದು, ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ:ಬರಲಿದೆ ಕರಣ್ ‘ಪ್ರೇಮಕತೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.