ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಲ್ಯಾಕ್‌ ಫ್ಯಾಂಥರ್‌’ ನಟ ಚಾಡ್ವಿಕ್‌ ಬೋಸ್‌ಮನ್‌ ಕ್ಯಾನ್ಸರ್‌ನಿಂದ ಸಾವು

Last Updated 29 ಆಗಸ್ಟ್ 2020, 8:27 IST
ಅಕ್ಷರ ಗಾತ್ರ

ಲಾಸ್‌ ಏಂಜಲಿಸ್‌: ಹಾಲಿವುಡ್‌ನ ಸೂಪರ್ ಹಿಟ್‌ ಚಿತ್ರ ‘ಬ್ಲ್ಯಾಕ್‌ ಪ್ಯಾಂಥರ್‌’ ಖ್ಯಾತಿಯ ನಟ, ಚಾಡ್ವಿಕ್‌ ಬೋಸ್‌ಮನ್‌ ಅವರು ದೀರ್ಘಕಾಲಿನ ಕರುಳಿನಕ್ಯಾನ್ಸರ್‌ನಿಂದಾಗಿ ಶನಿವಾರ ಲಾಸ್‌ ಏಂಜಲಿಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.

‘ಬೋಸ್ಮನ್ (43) ಅವರು ತಮ್ಮ ಆರೋಗ್ಯ ಪರಿಸ್ಥಿತಿಯ ಕುರಿತು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ‘ಅಸಂಖ್ಯ’ ಶಸ್ತ್ರಚಕಿತ್ಸೆ ಮತ್ತು ಕೀಮೋಥೆರಪಿಗಳಿಗೆ ಒಳಗಾಗುತ್ತಿದ್ದರೂ, ಅದರ ಮಧ್ಯೆಯೇ ಅವರು ಹಾಲಿವುಡ್‌ನ ಪ್ರಮುಖ ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದ್ದರು, ಎಂದು ಅವರ ಕುಟುಂಬ ವರ್ಗ ಹೇಳಿದೆ.

‘ಸೂಪರ್‌ ಹೀರೊ ಸಿನಿಮಾ ‘ಬ್ಲ್ಯಾಕ್ ಪ್ಯಾಂಥರ್’ನಲ್ಲಿ ‘ಕಿಂಗ್ ಟಿ ಚಲ್ಲಾ’ ಎಂಬ ಪಾತ್ರಕ್ಕೆ ಚಾಡ್ವಿಕ್‌ ಜೀವಂತಿಕೆ ತಂದು ಕೊಟ್ಟಿದ್ದಾರೆ. ಇದು ಅವರಿಗೆ ಸಿಕ್ಕ ಗೌರವವಾಗಿದೆ,’ ಎಂದು ಕುಟುಂಬಸ್ಥರು ಹೇಳಿದ್ದಾರೆ.

‘ನಿಜವಾದ ಹೋರಾಟಗಾರ ಚಾಡ್ವಿಕ್ ಎಲ್ಲದರಲ್ಲೂ ಸತತ ಹೋರಾಟ ನಡೆಸಿದರು,’ ಎಂದು ಕುಟುಂಬಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲಾಸ್‌ ಏಂಜಲೀಸ್‌ನ ತಮ್ಮ ಮನೆಯಲ್ಲಿ ತಮ್ಮ ಹೆಂಡತಿ ಮತ್ತು ಕುಟುಂಬದವರ ಜೊತೆಗಿರುವಾಗಲೇ ಅವರು ನಿಧನ ಹೊಂದಿದ್ದಾರೆ.

2018ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹೀರೋ ಆಧಾರಿತ ಚಿತ್ರ ‘ಬ್ಲ್ಯಾಕ್‌ ಪ್ಯಾಂಥರ್‌’ ಭಾರೀ ಯಶಸ್ಸು ಕಂಡಿತ್ತು. ಚಾಡ್ವಿಕ್‌ ಅವರಿಗೆ ಹಾಲಿವುಡ್‌ನಲ್ಲಿ ಖ್ಯಾತಿಯನ್ನೂ ತಂದುಕೊಟ್ಟಿತ್ತು.

ಚಾಡ್ವಿಕ್‌ ಅವರ ಅಗಲಿಕೆಗೆ ಅಮೆರಿಕ ಆಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮುಂತಾದವರು ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT