ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ಶನಿವಾರ ಮಾಹಿತಿ ಹಂಚಿಕೊಂಡಿದ್ದಾರೆ.

78 ವರ್ಷ ವಯೋಮಾನದ ಅಮಿತಾಬ್ ಬ್ಲಾಗ್ ಬರಹಗಳು ಹಾಗೂ ಟ್ವೀಟ್ ಮಾಡುವುದರಲ್ಲಿ ಸಕ್ರಿಯರಾಗಿದ್ದು, 'ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಯವಾಗಿದೆ...ಶಸ್ತ್ರಚಿಕಿತ್ಸೆ...ಬರೆಯಲು ಸಾಧ್ಯವಾಗುತ್ತಿಲ್ಲ...' ಎಂದು ತಮ್ಮ ಬ್ಲಾಗ್ನಲ್ಲಿ ಪ್ರಕಟಿಸಿದ್ದಾರೆ.

ಟ್ವಿಟರ್ನಲ್ಲಿ ಆಶ್ಚರ್ಯ ಸೂಚಕ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನಷ್ಟೇ ಹಾಕಿದ್ದಾರೆ.

ಕೋವಿಡ್ಗೆ ಬಹಳ ದಿನಗಳವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಪಡೆದು ಮತ್ತೆ ಚಿತ್ರೀಕರಣಗಳಲ್ಲಿ ಅಮಿತಾಬ್ ಭಾಗಿಯಾಗಿದ್ದರು. ವಿಕಾಸ್ ಬಾಹ್ಲ್ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿಯೂ ತಿಳಿಸಿದ್ದರು.

ಅಮಿತಾಬ್ ಅಭಿನಯದ ಚೆಹರೆ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ ಹಾಗೂ ಕ್ರೀಡಾ ಕಥೆಯನ್ನು ಆಧರಿಸಿದ 'ಝುಂಡ್' (Jhund) ಸಿನಿಮಾ ಜೂನ್ 18ರಂದು ತೆರೆ ಕಾಣಲು ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.