ಭಾನುವಾರ, ನವೆಂಬರ್ 29, 2020
24 °C

ಬಾಲಿವುಡ್ ನಟ ಫರಾಝ್ ಖಾನ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಫರಾಝ್‌ ಖಾನ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. 46 ವರ್ಷದ ಈ ನಟ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ‘ಮೆಹಂದಿ’ ‘ಫರೇಬ್‌’ ಮುಂತಾದ ಸಿನಿಮಾಗಳಿಂದ ಇವರು ಖ್ಯಾತಿ ಪಡೆದಿದ್ದರು. 

ಇವರ ಸಾವಿನ ಸುದ್ದಿಯನ್ನು ಖಚಿತಪಡಿಸಿರುವ ನಟಿ, ನಿರ್ಮಾಪಕಿ ಪೂಜಾ ಭಟ್‌ ‘ನಾನು ಅತ್ಯಂತ ದುಃಖಿತಳಾಗಿದ್ದೇನೆ. ಇಂದು ಫರಾಝ್ ಖಾನ್ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಅವರ ಕುಟುಂಬಕ್ಕೆ ನಿಮ್ಮ ಹಾರೈಕೆ ಇರಲಿ. ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ. ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಹೆಂದಿ, ಫರೇಬ್‌, ದುಲ್ಹನ್‌ ಬನೂ ಮೇ ತೇರಿ, ಚಾಂದ್ ಬುಜ್‌ ಗಯಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು ಫರಾಝ್‌.

ಕೆಳೆದ ಕೆಲ ವಾರಗಳ ಹಿಂದೆ ಫರಾಝ್ ಸಹೋದರ ಫ್ಹಮಾನ್‌ ಖಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೇಳಿಕೊಂಡಿದ್ದರು. ಅವರ ಮನವಿಗೆ ಸ್ಪಂದಿಸಿದ ನಟ ಸಲ್ಮಾನ್ ಖಾನ್ ಫರಾಝ್ ಅವರ ವೈದ್ಯಕೀಯ ವೆಚ್ಚ ಭರಿಸಲು ಮುಂದೆ ಬಂದಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು