ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಮಾಧುರಿ ದೀಕ್ಷಿತ್‌ಗೆ ‘ವಿಶೇಷ ಮನ್ನಣೆ’

Published 20 ನವೆಂಬರ್ 2023, 13:28 IST
Last Updated 20 ನವೆಂಬರ್ 2023, 13:28 IST
ಅಕ್ಷರ ಗಾತ್ರ

ಪಣಜಿ: ಭಾರತ ಸಿನಿಮಾ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಕೊಡುಗೆಯನ್ನು ಪರಿಗಣಿಸಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರಿಗೆ ಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ‘ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಕುರಿತು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೋರ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ನಾಲ್ಕು ದಶಕಗಳಿಂದ ಅಪ್ರತಿಮ ಪ್ರತಿಭೆಯೊಂದಿಗೆ ಸಿನಿ ಪರದೆಯನ್ನು ಮಾಧುರಿ ದೀಕ್ಷಿತ್‌ ಅವರು ಅಲಂಕರಿಸಿದ್ದಾರೆ. ಅವರ ವಿಭಿನ್ನ ನಟನೆಗೆ ಮಿತಿಯಿಲ್ಲ. ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

54ನೇ ಆವೃತ್ತಿಯ ಅಂತರರಾಷ್ಟ್ರೀಯ ಸಿನಿಮೋತ್ಸವ ಗೋವಾದಲ್ಲಿ ನಡೆಯುತ್ತಿದೆ. ಇಂದಿನಿಂದ (ನ.20) 9 ದಿನ ಸಿನಿಮಾಗಳ ಹಬ್ಬ ನಡೆಯಲಿದೆ.

ಚಲನಚಿತ್ರೋತ್ಸವಕ್ಕೆ ಅತಿಥಿಯಾಗಿ ವಿಜಯ್‌ ಸೇತುಪತಿ, ಸಾರಾ ಅಲಿ ಖಾನ್‌, ಪಂಕಜ್‌ ತ್ರಿಪಾಠಿ, ಸನ್ನಿ ಡಿಯೋಲ್‌, ಕರಣ್‌ ಜೋಹರ್‌, ಶ್ರೇಯಾ ಘೋಶಾಲ್‌ ಸೇರಿದಂತೆ ತಾರೆಗಳ ದಂಡೇ ಹರಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT