ಸಾಹಿರ್–ಅಮೃತಾ ಪಾತ್ರದಲ್ಲಿ ಅಭಿ–ಐಶೂ

ಮಂಗಳವಾರ, ಮಾರ್ಚ್ 26, 2019
27 °C

ಸಾಹಿರ್–ಅಮೃತಾ ಪಾತ್ರದಲ್ಲಿ ಅಭಿ–ಐಶೂ

Published:
Updated:

ಪಂಜಾಬ್‌ನ ಕವಿ ಸಾಹಿರ್‌ ಲೂಧಿಯಾನ್ವಿ ಮತ್ತು ಅವರ ಪ್ರೇಮಿ ಅಮೃತಾ ಪ್ರೀತಂ ಅವರ ರೊಮ್ಯಾಂಟಿಕ್‌ ಕತೆಯನ್ನು ತೆರೆಯ ಮೇಲೆ ಕಾಣುವ ಕಾಲ ಕೂಡಿಬಂದಿದೆ. ಬಯೋಪಿಕ್‌ಗಳ ಶಕೆಯಲ್ಲಿ ಸಾಹಿರ್ ಲೂಧಿಯಾನ್ವಿ ಬದುಕೂ ತೆರೆಗೆ ಬರಲು ಸಿದ್ಧವಾಗಿದೆ.

ಅದಕ್ಕಿಂತಲೂ ದೊಡ್ಡ ಆಕರ್ಷಣೆಯ ಸಂಗತಿ ಎಂದರೆ, ಸಾಹಿರ್‌– ಅಮೃತಾ ಜೋಡಿಯಾಗಿ ನಟಿಸಲಿರುವುದು ಅಭಿಷೇಕ್‌ ಬಚ್ಚನ್‌. ಮತ್ತು ಐಶ್ವರ್ಯಾ ರೈ ಬಚ್ಚನ್‌.  ಹಿಟ್‌ ಮತ್ತು ಅದ್ದೂರಿ ಚಿತ್ರಗಳ ಸರದಾರ ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ತೆರೆಗೆ ತರಲಿದ್ದಾರೆ.

ಸಾಹಿರ್ ಪಾತ್ರವನ್ನು ಮೊದಲಿಗೆ ಶಾರುಖ್‌ ಖಾನ್ ನಿರ್ವಹಿಸುತ್ತಾರೆ ಎಂಬ ವದಂತಿ ಹಬ್ಬಿತ್ತು. ಬಳಿಕ ಇರ್ಫಾನ್ ಖಾನ್‌ ಹೆಸರು ಕೇಳಿಬಂದಿತ್ತು. ಕೊನೆಗೂ ಪ್ರಮುಖ ಪಾತ್ರಗಳ ಆಯ್ಕೆಯನ್ನು ಬನ್ಸಾಲಿ ಮುಗಿಸಿದ್ದಾರೆ. ಜೂನಿಯರ್‌ ಬಚ್ಚನ್‌ ದಂಪತಿಯನ್ನು ತೆರೆಯ ಮೇಲೆ ಒಟ್ಟಿಗೆ ನೋಡಲು ಕಾಯುತ್ತಿದ್ದ ಇಬ್ಬರ ಅಭಿಮಾನಿಗಳಿಗೆ ಈಗ ಖುಷಿಯಾಗಿದೆ.

ಅಮ್ಮನ ಪಟ್ಟಕ್ಕೇರಿದ ಬಳಿಕ ಐಶೂ ಪಾತ್ರಗಳ ಆಯ್ಕೆಯಲ್ಲಿ ಮತ್ತಷ್ಟು ಚೂಸಿಯಾಗಿದ್ದಾರೆ. ಅಲ್ಲದೆ ತಮ್ಮ ನಿಲುವು, ಧೋರಣೆಗಳಿಗೆ ನಿರ್ದೇಶಕರು ಮತ್ತು ನಿರ್ಮಾಪಕರು ಸಮ್ಮತಿಸಿದರೆ ಮಾತ್ರ ಚಿತ್ರಕತೆಯನ್ನು ಓದಿಸಿಕೊಳ್ಳುತ್ತಾರೆ. ಆದರೆ ಬನ್ಸಾಲಿ ಚಿತ್ರದ ಮೂಲಕ ಕಮ್‌ಬ್ಯಾಕ್‌ ಮಾಡುವ ಅವಕಾಶ ಸಿಕ್ಕಿರುವುದು ಅವರಿಗೆ ಖುಷಿ ತಂದಿದೆ.

ಸಾಮಾನ್ಯವಾಗಿ ಐಶ್ವರ್ಯಾ ತಮ್ಮ ಚಿತ್ರಗಳನ್ನು ತಾವೇ ಪ್ರಕಟಿಸಿಕೊಳ್ಳುವುದಿಲ್ಲ. ಆದರೆ ಇತ್ತೀಚಿಗೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಹೊಸದೊಂದು ಚಿತ್ರ ಒಪ್ಪಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಅದು ಅಮೃತಾ ಪ್ರೀತಂ ಪಾತ್ರ ಎಂಬುದು ಈಗ ಖಚಿತವಾಗಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !