ಹುಳಿ ಮಾವಿಗೆ ಉಪ್ಪು ಖಾರ ಹಚ್ಚಿ...

ಬುಧವಾರ, ಮಾರ್ಚ್ 20, 2019
31 °C

ಹುಳಿ ಮಾವಿಗೆ ಉಪ್ಪು ಖಾರ ಹಚ್ಚಿ...

Published:
Updated:
Prajavani

ಉದ್ದುದ್ದ ಸೀಳಿದ ಮಾವಿನ ಕಾಯಿ ಹೋಳನ್ನು ಉಪ್ಪು ಮತ್ತು ಖಾರ ಪುಡಿ ಸವರುತ್ತಾ ಒಂದೊಂದಾಗಿ ಬಾಯಿಗಿಡುತ್ತಾ... ನೋಡಿ... ನಿಮ್ಮ ಬಾಯಲ್ಲಿ ಛಳ್‌ ಅಂತ ಜೊಲ್ಲುರಸ ಹಾರಿತು!

ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಕೂಡಾ ಹೀಗೇ ನೆನಪಿಸಿಕೊಂಡೇ ನೀರಾಗುತ್ತಾರಂತೆ!

ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಹುಳಿಮಾವು ತಿನ್ನುವಾಸೆ ಆಗಿದ್ದರೆ ಬೇರೇನೋ ಸುದ್ದಿ ಇರಬೇಕು ಎಂದು ಲೆಕ್ಕಾಚಾರ ಹಾಕಬೇಡಿ. ದೀಪಿಕಾಗೆ ಹುಳಿ ಮಾವಿನ ಹೋಳನ್ನು ಉಪ್ಪು ಸವರಿ ತಿನ್ನುವುದೆಂದರೆ ಸಖತ್ ಇಷ್ಟವಂತೆ.

ನಂಬುತ್ತೀರೋ ಇಲ್ಲವೋ ಎರಡು ವಾರದಿಂದೀಚೆ ಚಿತ್ರೀಕರಣ ನಡೆಯುತ್ತಿರುವ ‘ಛಪಾಕ್‌’ ಸಿನಿಮಾವನ್ನು ದೀಪಿಕಾ ಒಪ್ಪಿಕೊಂಡ ಕಾರಣವೇ ಹುಳಿ ಮಾವು ಅಂತೆ!

ಆ್ಯಸಿಡ್‌ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್‌ ಕುರಿತ ಸಿನಿಮಾ ‘ಛಪಾಕ್‌’ನಲ್ಲಿ ಅಂತಹುದೊಂದು ದೃಶ್ಯವಿದೆ. ಆ ಒಂದು ದೃಶ್ಯದ ಮೇಲಿನ ವ್ಯಾಮೋಹದಿಂದ ತಾವು ಸಿನಿಮಾಕ್ಕೆ ಕಾಲ್‌ಶೀಟ್‌ ನೀಡಿದೆ ಎಂದು ನಿರ್ದೇಶಕಿ ಮೇಘನಾ ಗುಲ್ಜಾರ್‌ ಬಳಿ ದೀಪಿಕಾ ಹೇಳಿದ್ದರಂತೆ.

ದೀಪಿಕಾ ಈ ಮಾತು ಹೇಳಿರುವುದು ತಮಾಷೆಗಾಗಿ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ದೀಪಿಕಾ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !