ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌: 12 ವರ್ಷಗಳ ಬಳಿಕ ಶಿಲ್ಪಾ ತೆರೆಗೆ

Last Updated 21 ಜುಲೈ 2019, 13:11 IST
ಅಕ್ಷರ ಗಾತ್ರ

44 ವಯಸ್ಸಿನ ಶಿಲ್ಪಾ ಶೆಟ್ಟಿ ಕುಂದ್ರಾ 12 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ತಮ್ಮದೇ ಅಡುಗೆ ಚಾನಲ್‌ನಲ್ಲಿ ಬ್ಯುಸಿಯಾಗಿದ್ದ ಶಿಲ್ಪಾ ಈಗ ಬಿಡುವು ಮಾಡಿಕೊಂಡು ಸಿನಿಮಾವೊಂದಕ್ಕೆ ಸಹಿಹಾಕಿದ್ದಾರಂತೆ. 2007ರಲ್ಲಿ ಅವರು ‘ಅಪ್ನೇ’ ಸಿನಿಮಾದಲ್ಲಿ ಸನ್ನಿ ಡಿಯೊಲ್‌, ಬಾಬಿ ಡಿಯೊಲ್‌, ಕತ್ರಿನಾ ಕೈಫ್‌ ಹಾಗೂ ಧರ್ಮೇಂದ್ರ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈಗ ಹೆಸರಿಡದ ಸಿನಿಮಾವೊಂದರಲ್ಲಿ ದಿಲ್ಜಿತ್ ದೋಸಂಜ್‌ ಮತ್ತು ಯಾಮಿ ಗೌತಮ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಲೇಖಕಿಯ ಪಾತ್ರ ಮಾಡಲಿದ್ದಾರೆ.

ರಮೇಶ್‌ ತೌರಾನಿ ಅವರ ಟಿಪ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ವಿಭಾ ಸಿಂಗ್ ಅರ್ಷದ್ ಸಯ್ಯದ್ ಅವರ ಚಿತ್ರ ಕಥೆ, ಸೊಮ್‌ ಹರೌನ್‌ ನಿರ್ದೇಶನ ಈ ಸಿನಿಮಾಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT