ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಟಿ ಔರ್‌ ಬಬ್ಲಿ 2’ಸೈಫ್‌, ರಾಣಿ ಚಮಕ್‌

Last Updated 23 ಡಿಸೆಂಬರ್ 2019, 3:30 IST
ಅಕ್ಷರ ಗಾತ್ರ

ಯಶ್ ರಾಜ್ ಫಿಲ್ಮ್ಸ್(ವೈಆರ್‌ಎಫ್) ‘ಬಂಟಿ ಔರ್ ಬಬ್ಲಿ– 2’ (ಬಿಬಿ–2) ಸಿನಿಮಾದಲ್ಲಿ ಸೈಫ್‌ ಅಲಿಖಾನ್‌ ಹಾಗೂ ರಾಣಿ ಮುಖರ್ಜಿ ಮುಖ್ಯಪಾತ್ರಗಳಲ್ಲಿ ನಟಿಸಲಿದ್ದಾರೆ.

ಮತ್ತೊಂದು ವಿಶೇಷವೆಂದರೆ ಇವರಿಬ್ಬರು 11 ವರ್ಷಗಳ ನಂತರ ಈ ಸೀಕ್ವೆಲ್‌ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ವಿಷಯವನ್ನು ಯಶ್‌ರಾಜ್‌ ಫಿಲ್ಮ್ಸ್‌ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ. ಈ ಚಿತ್ರವನ್ನು ಆದಿತ್ಯ ಕಪೂರ್‌ ನಿರ್ಮಿಸುತ್ತಿದ್ದಾರೆ.

ಸೈಫ್‌ ಹಾಗೂ ರಾಣಿ 2004ರಲ್ಲಿ ಬಿಡುಗಡೆಯಾದ ಹಮ್‌ತುಮ್‌, 2007ರ ತಾ ರಾ ರಮ್‌ಪಮ್‌, ಥೋಡಾ ಪ್ಯಾರ್‌ ಥೋಡಾ ಮ್ಯಾಜಿಕ್ ಚಿತ್ರಗಳಲ್ಲಿ ಜೋಡಿಯಾಗಿ ಟನಿಸಿದ್ದರು. ಬಂಟಿ ಔಟ್‌ ಬಬ್ಲಿ ಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌ ಹಾಗೂ ರಾಣಿ ಮುಖರ್ಜಿ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಈಗ ಇದರ ಸೀಕ್ವೆಲ್‌ನಲ್ಲಿ ಸಿದ್ಧಾಂತ್‌ ಚತುರ್ವೇದಿ ಹಾಗೂ ಶಾರ್ವರಿ ನಟಿಸುತ್ತಿದ್ದಾರೆ. ಡಿ.17ರಂದು ಈ ಚಿತ್ರದ ಬಗ್ಗೆ ಘೋಷಣೆ ಮಾಡಲಾಗಿದೆ.

ಈ ಸೀಕ್ವೆಲ್ ಚಿತ್ರವನ್ನು ವರುಣ್‌ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯೂ ಅವರದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT