ಈ ಹಿಂದೆ ‘ಸ್ವಾರ್ಥ ರತ್ನ’ ಸೇರಿದಂತೆ ಎರಡು ಚಿತ್ರಗಳಲ್ಲಿ ನಟಿಸಿರುವ ಆದರ್ಶ ಗುಂಡುರಾಜ್ ನಟನೆಯ ‘ಕ್ಯಾಲೆಂಡರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ‘ನಾನ್ಯಾರು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.

‘ಇದು ನಾನು ನಾಯಕನಾಗಿ ನಟಿಸಿರುವ ಮೂರನೇ ಚಿತ್ರ. ವರ್ಷಗಳು ಉರುಳುತ್ತಿರುತ್ತವೆ. ಆದರೆ ದಿನವನ್ನು ಗುರುತಿಸಲು ನಮಗೆ ‘ಕ್ಯಾಲೆಂಡರ್’ ಬೇಕು. ಶೀರ್ಷಿಕೆಗೂ ಹಾಗೂ ಚಿತ್ರದ ಕಥೆಗೂ ಸಂಬಂಧವಿದೆ. ನಾನೇ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ. ಹೆಣ್ಣುಮಕ್ಕಳಿಗಂತೂ ಈ ಕಥೆ ಬಹಳ ಹತ್ತಿರವಾಗುತ್ತದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ನಲ್ಲಿದೆ’ ಎನ್ನುತ್ತಾರೆ ಆದರ್ಶ ಗುಂಡುರಾಜ್.

‘ನಾನು ರಂಗಭೂಮಿಯಿಂದ ಬಂದವನು. ನಿರ್ದೇಶಕನಾಗಿ ಇದು ಮೊದಲ ಚಿತ್ರ. ರಮೇಶ್ ಕೊಯಿರಾ ಛಾಯಾಚಿತ್ರಗ್ರಹಣ, ಸುನಾದ್ ಗೌತಮ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸುಶ್ಮಿತಾ ಹಾಗೂ ನಿವಿಷ್ಕ ಪಾಟೀಲ್ ನಾಯಕಿಯರು. ವಿಶೇಷ ಪಾತ್ರದಲ್ಲಿ ನಟಿ ಮಾಲಾಶ್ರೀ ನಟಿಸಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡು, ಸುಚೇಂದ್ರ ಪ್ರಸಾದ್ ಮುಂತಾದವರು ತಾರಾಬಳಗದಲ್ಲಿದ್ದಾರೆ’ ಎಂದರು ನಿರ್ದೇಶಕ ನವೀನ್ ಶಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.