ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ಝಲಕ್!

ಬುಧವಾರ, ಜೂನ್ 19, 2019
31 °C
Deepika Padukone

ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ಝಲಕ್!

Published:
Updated:
Prajavani

72ನೇ ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್‌ ತಾರೆಯರು ಮಿಂಚಿನ ಸಂಚಲನವನ್ನೇ ಹರಿಸಿದ್ದಾರೆ. ಈಚೆಗಷ್ಟೇ ಮದುವೆಯಾದ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ನೆರೆದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರೆ, ಹುಮಾ ಖುರೇಷಿ, ವಿಕಾಸ್ ಖನ್ನಾ, ಕಂಗನಾ ರೌನತ್, ಎ.ಅರ್. ರೆಹಮಾನ್ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಚಿತ್ರೋತ್ಸವಕ್ಕೆ ಹಬ್ಬದ ಕಳೆ ತಂದರು.

ಚಿತ್ರೋತ್ಸವದ ಎರಡನೇ ದಿನ ದೀಪಿಕಾ ಮೂರು ಭಿನ್ನ ಉಡುಗೆಗಳ ಮೂಲಕ ಅಭಿಮಾನಿಗಳ ಗಮನ ಸೆಳೆದರು. ಉದ್ದನೆಯ ನೀಲಿ–ಬಿಳಿ ಪಟ್ಟೆಗಳುಳ್ಳ ಪ್ಯಾಂಟ್ ಶರ್ಟ್‌, ಹಸಿರು ಒಳಉಡುಪು ಮತ್ತು ಕಪ್ಪು ಬಣ್ಣದ ಉದ್ದನೆಯ ಗೌನ್‌ ತೊಟ್ಟು, ಗಿಣಿ ಹಸಿರು ಬಣ್ಣದ ಕನ್ನಡಕ ತೊಟ್ಟು ಫೋಟೊಗ್ರಾಫರ್‌ಗಳಿಗೆ ಫೋಸ್ ನೀಡಿದರು.  ಬಿಳಿ ‍ಪ್ಯಾಂಟಿನ ಮೇಲೆ ಒಳ ಉಡುಪು ಕಾಣುವ ಶೀರ್ ಟಾಪ್ ಧರಿಸಿದ ವಿಡಿಯೊವೊಂದನ್ನು ದೀಪು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಸುದ್ದಿಯಾದರು.

ಅಷ್ಟೇ ಅಲ್ಲ ರೆಡ್ ಕಾರ್ಪೆಟ್‌ನಲ್ಲಿ ಬಿಳಿ ಉದ್ದನೆಯ ಗೌನ್‌ಗೆ ಚಾಕಲೇಟ್ ಬಣ್ಣದ ಬೊ ಮಾದರಿ ವಿನ್ಯಾಸದ ಮೇಲುಡುಗೆಯಲ್ಲಿ ಎತ್ತಿ ಕಟ್ಟಿದ ಪೋನಿಟೇಲ್ ಹೇರ್ ಸ್ಟೈಲ್‌ನಲ್ಲಿ ಗಾಢವಾದ ಕಾಡಿಗೆಯ ಕಂಗಳಲ್ಲಿ ಪ್ರೇಕ್ಷಕರಿಗೆ ಹೂ ಮುತ್ತೊಂದನ್ನು ತೇಲಿಬಿಟ್ಟರು. 

ಮತ್ತೊಂದು ದಿನ ಗಿಳಿ ಹಸಿರು ಬಣ್ಣದ ಪಾರದರ್ಶಕ ಉದ್ದನೆಯ ಉಡುಪಿನಲ್ಲಿ ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸಿದರು. 

ಇನ್ನು ಪ್ರಿಯಾಂಕ ಚೋಪ್ರಾ ತಾವು ದೀಪಿಕಾಗಿಂತ ಕಮ್ಮಿ ಇಲ್ಲ ಎಂಬಂತೆ ಮೊದಲ ದಿನ ಚಾಕಲೇಟ್ ಬಣ್ಣದ ಉದ್ದನೆಯ ಉಡುಪಿನ ಸೈಟ್ ಕಟ್‌ನಲ್ಲಿ ತಮ್ಮ ನೀಳ ಕಾಲನ್ನು ಪ್ರದರ್ಶಿಸುತ್ತ ಮಾದಕ ಲೋಕ ಸೃಷ್ಟಿಸಿದರು. ಬೆಳ್ಳಿ ಬಣ್ಣದ ಉದ್ದನೆಯ ಕಿವಿಯೋಲೆ, ಇಳಿಬಿಟ್ಟ ಕೂದಲು ಮತ್ತು ಸರಳ ಮೇಕಪ್‌ನಿಂದ ಸರಳ ಸೌಂದರ್ಯಕ್ಕೆ ಮುನ್ನುಡಿ ಬರೆದರು.

ಮತ್ತೊಂದು ದಿನ ತಿಳಿ ನೇರಳೆಯ ಪಾರದರ್ಶಕ ಉಡುಪಿಗೆ ತಕ್ಕಂತೆ ಬಿಳಿ ಬಣ್ಣದ ಶೂ ಧರಿಸಿ, ಪತಿ ನಿಕ್ ಜೋನಸ್ ಜೊತೆಗೆ ಜೋಡಿಯಾಗಿ ಕಾಣಿಸಿಕೊಂಡರು.

ಭಾರತದ ಖ್ಯಾತ ಶೆಫ್ ಆಗಿ ಜನಪ್ರಿಯತೆ ಗಳಿಸಿರುವ ವಿಕಾಸ್ ಖನ್ನಾ ಅತಿಥಿಯಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದು ವಿಶೇಷ. ಅವರ ‘ದಿ ಲಾಸ್ಟ್ ಕಲರ್’ ಚಿತ್ರಕ್ಕೆ ವಿಶೇಷ ಪ್ರದರ್ಶನ ಭಾಗ್ಯವೂ ಕಾನ್‌ ಚಿತ್ರೋತ್ಸವದಲ್ಲಿ ದಕ್ಕಿತು. ಕಪ್ಪು ಬಣ್ಣದ ಬ್ರೇಜರ್‌ನಲ್ಲಿ ಕಂಗೊಳಿಸುತ್ತಿದ್ದ ವಿಕಾಸ್ ಖನ್ನಾ, ಯಾವ ಹಾಲಿವುಡ್ ನಟನಿಗೂ ಕಮ್ಮಿ ಇಲ್ಲವೆಂಬಂತೆ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದರು.

ಎರಡನೇ ಬಾರಿ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ನಟಿ ಹುಮಾ ಖುರೇಷಿ, ಕಂಗನಾ ರೌನತ್ , ಡಯಾನಾ ಪೆಂಟಿ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿಲ್ಲವಾದರೂ, ಇಬ್ಬರೂ ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್‌ನ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಹಾಲುಬಿಳುಪು ಬಣ್ಣದ ಉದ್ದನೆಯ ಗೌನಿನಲ್ಲಿ ಕಂಗನಾ ಎಲ್ಲರತ್ತ ಕೈಬೀಸಿ ಮುಗುಳುನಗೆ ಚೆಲ್ಲಿದರು. ಹುಮಾ ಖುರೇಷಿ ಗಂಧದ ಬಣ್ಣದ ಉಡುಪಿನಲ್ಲಿ ಸರಳವಾಗಿ ಕಂಗೊಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !