ಗುರುವಾರ , ಡಿಸೆಂಬರ್ 12, 2019
17 °C

ಚೇಸ್‌ ಚಿತ್ರದ ಟೀಸರ್‌ ಬಿಡುಗಡೆಗೆ ದಿನಾಂಕ ನಿಗದಿ

Published:
Updated:

ಬೆಂಗಳೂರು: ‌ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧಗೊಂಡಿರುವ ‘ಚೇಸ್’ ಚಿತ್ರದ ಟೀಸರ್ ಇದೇ ತಿಂಗಳು 16ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಮಾತಾನಾಡಿರುವ ಚಿತ್ರದ ನಿರ್ದೇಶಕ ವಿಲೋಕ್ ಶೆಟ್ಟಿ, ‘ಚಿತ್ರವನ್ನು ಶೀಘ್ರದಲ್ಲೇ ಸೆನ್ಸಾರ್‌ಗೆ ಕಳುಹಿಸಲಾಗುತ್ತಿದ್ದು, ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ,' ಎಂದು ತಿಳಿಸಿದ್ದಾರೆ. 

ಬೆಂಗಳೂರು, ಮಂಗಳೂರು, ಉಡುಪಿ, ಹಿಮಾಚಲ ಪ್ರದೇಶ, ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು, ರಾಧಿಕಾ ಚೇತನ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಅರವಿಂದ್ ರಾವ್, ಸೇರಿದಂತೆ ಮುಂತಾದವರ ತಾರಾಗಣವಿದೆ.

ಸಿಂಪ್ಲಿ ಫನ್ ಮೀಡಿಯಾ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಚೇಸ್ ಚಿತ್ರಕ್ಕೆ ಅನಂತ್ ರಾಜ್ ಅರಸ್ ಛಾಯಾಗ್ರಹಣ ಮಾಡಿದ್ದು, ಕಾರ್ತಿಕ್ ಆಚಾರ್ಯ ಸಂಗೀತ ನೀಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು