ಬುಧವಾರ, ಜನವರಿ 29, 2020
26 °C

ಟಾಲಿವುಡ್‌ನಲ್ಲಿ ಸ್ಟಾರ್‌ವಾರ್‌: ಚಿರಂಜೀವಿ–ರಾಜಶೇಖರ್‌ ಕಿತ್ತಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಗಾಸ್ಟಾರ್‌ ಕೆ. ಚಿರಂಜೀವಿ ಮತ್ತು ನಟ ವಿ.ರಾಜಶೇಖರ್‌ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದಾರೆ. ತೆಲು ಚಿತ್ರಕಲಾವಿದರ ಸಂಘ ‘ಮಾ’ ಹೊಸವರ್ಷದ ಡೈರಿ ಬಿಡುಗಡೆ ಸಮಾರಂಭದಲ್ಲಿ ಇಬ್ಬರೂ ನಟರ ವಾಕ್ಸಮರ ತಾರಕಕ್ಕೇರಿದ್ದು, ಘಟನೆಯ ನಂತರ ಇಡೀ ತೆಲುಗು ಚಿತ್ರರಂಗ ಎರಡು ಬಣಗಳಾಗಿ ಒಡೆದು ಹೋಗಿದೆ. 

ಚಿರಂಜೀವಿ ಮತ್ತು ರಾಜಶೇಖರ್‌ ನಡುವಿನ ವೈಮನಸ್ಸು,ಕಿತ್ತಾಟ ಹೊಸದೇನಲ್ಲ.ಮೊದಲಿನಿಂದಲೂ ಇಬ್ಬರೂ ಹಾವು, ಮುಂಗಸಿ ಥರಾ ಕಿತ್ತಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 

‘ಮಾ’ ಅಧ್ಯಕ್ಷ ನರೇಶ್‌ ಮತ್ತು ರಾಜಶೇಖರ್‌ ನಡುವೆ ಅನೇಕ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಸಮಾರಂಭದಲ್ಲಿ ಹೊರಬಿತ್ತು. ವೇದಿಕೆ ಏರಿದ ರಾಜಶೇಖರ್‌ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡರು. ಅವರನ್ನು ತಡೆಯಲು ಚಿರಂಜೀವಿ, ಜಯಸುಧಾ, ಮೋಹನ್‌ ಬಾಬು, ಕೃಷ್ಣಂರಾಜು ಯತ್ನಿಸಿದರು. ಸಿಟ್ಟಿನಿಂದಲೇ ರಾಜಶೇಖರ್‌ ಅಲ್ಲಿಂದ ತೆರಳಿದರು. 

ಇದರಿಂದ ತೀವ್ರ ಮುಜುಗರ ಅನುಭವಿಸಿದ ಚಿರಂಜೀವಿ, ‘ಇದೊಂದು ಆಂತರಿಕ ವಿಚಾರ ಬಹಿರಂಗವಾಗಿ ಕಿತ್ತಾಡಿಕೊಳ್ಳುವುದು ಸರಿಯಲ್ಲ. ರಾಜಶೇಖರ್‌ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಹರಿಹಾಯ್ದರು. ಈ ಘಟನೆಯ ನಂತರ ಚಿತ್ರರಂಗ ಎರಡು ಬಣಗಳಾಗಿ ಹೋಳಾಗಿದೆ. ಕೆಲವರು ರಾಜಶೇಖರ್‌ ಬೆಂಬಲಕ್ಕೆ ನಿಂತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು