ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನರ್ಥ’ ಟ್ರೇಲರ್‌ ಬಿಡುಗಡೆ

Published 19 ಮೇ 2024, 22:30 IST
Last Updated 19 ಮೇ 2024, 22:30 IST
ಅಕ್ಷರ ಗಾತ್ರ

‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’ ಮುಂತಾದ ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿದ್ದ ರಮೇಶ್ ಕೃಷ್ಣ ಆ್ಯಕ್ಷನ್‌–ಕಟ್‌ ಹೇಳಿರುವ ‘ಅನರ್ಥ’ ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

‘ಬಲಹೀನತೆಯಿಂದ ಕ್ರೂರತನ ಹುಟ್ಟುತ್ತದೆ’ ಎಂಬ ಅಡಿಬರಹ ಹೊಂದಿರುವ ಚಿತ್ರ ಸೆನ್ಸಾರ್‌ ಮುಗಿಸಿ ಶೀಘ್ರದಲ್ಲಿ ತೆರೆಗೆ ಬರಲು ಸಿದ್ಧವಿದೆ. ‘ಅವಕಾಶ್-ಆಕೃತಿ ಎರಡು ಪಾತ್ರಗಳ ಸುತ್ತ ಚಿತ್ರವು ಸಾಗುತ್ತದೆ. ಇಬ್ಬರು ಪ್ರೀತಿಸಿರುತ್ತಾರೆ. ಅಮವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ, ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ? ಎಂಬುದನ್ನು ಚಿತ್ರದಲ್ಲಿ ನೋಡಬೇಕು. ಊಹಿಸಲಾಗದ ತಿರುವುಗಳಿವೆ. ಕಮರ್ಷಿಯಲ್‌ ಚಿತ್ರಗಳಿಂದ ಹೊರತಾದ ಕೆಲವು ಸಂಗತಿಗಳಿವೆ’ ಎಂದರು ನಿರ್ದೇಶಕರು. 

ತೇಜಸ್ ಸಿನಿ ಕ್ರಿಯೇಶನ್ಸ್ ಮೂಲಕ ಶ್ರೀಧರ್.ಎನ್.ಸಿ.ಹೊಸಮನೆ ಬಂಡವಾಳ ಹೂಡಿದ್ದಾರೆ. ನಾಯಕ ವಿಶಾಲ್ ಮಣ್ಣೂರು ಅವರಿಗೆ ವಿಹಾನಿ ಜೋಡಿಯಾಗಿದ್ದಾರೆ. ವಿ.ನಾಗೇಂದ್ರಪ್ರಸಾದ್ ಸಾಹಿತ್ಯ–ಸಂಗೀತ, ಕುಮಾರ್‌ಗೌಡನಾಗವಾರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT