ಭಾನುವಾರ, ಜನವರಿ 19, 2020
25 °C

ವಿದೇಶದಲ್ಲೂ ‘ಕೋಬ್ರಾ’ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಕ್ರಮ್‌ ಅಭಿನಯದ ‘ಕೋಬ್ರಾ’ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಈಗಾಗಲೇ ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮುಂದಿನ ಭಾಗದ ಚಿತ್ರೀಕರಣ ವಿದೇಶದಲ್ಲಿ ನಡೆಸಲಿದೆ. 

ಹೊಸ ವರ್ಷದ ಆರಂಭದಲ್ಲೇ ಯುರೋಪ್‌ ಮತ್ತು ರಷ್ಯಾದಲ್ಲಿ ಈ ಸಿನಿಮಾದ ಶೂಟಿಂಗ್‌ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ ‘ಕೋಬ್ರಾ’ ಚಿತ್ರದ ಫಸ್ಟ್‌ ಲುಕ್‌ ಪೊಂಗಲ್‌(ಸಂಕ್ರಾಂತಿ) ಹಬ್ಬದ ಸಂಧರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ವಿಕ್ರಮ್‌ ಪಾತ್ರವನ್ನು ನೋಡಿ ಚಿತ್ರಕ್ಕೆ ‘ಕೋಬ್ರಾ’ ಹೆಸರಿಡಲಾಗಿದ್ಯಂತೆ. ಈ ಚಿತ್ರ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ತೆರೆ ಮೇಲೆ ಬರಲಿದೆ. ಸಿನಿಮಾದಲ್ಲಿ ಕರಾವಳಿ ಬೆಡಗಿ ಶ್ರೀನಿಧಿ ಶೆಟ್ಟಿ, ಭಾರತೀಯ ಕ್ರಿಕೆಟ್‌ ಆಟಗಾರ ಇರ್ಫಾನ್ ಪಠಾನ್‌, ಕೆ.ಎಸ್‌ ರವಿ ಕುಮಾರ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ.

‘ಕೋಬ್ರಾ’ ಚಿತ್ರಕ್ಕೆ ಎ.ಆರ್‌ ರೆಹಮಾನ ಸಂಗೀತ ನಿರ್ದೇಶನವಿದೆ. ಸೆವೆನ್‌ ಸ್ಕ್ರೀನ್‌ ಡಿಯೋಸ್‌ ಬ್ಯಾನರ್‌ ಅಡಿ ಲಲಿತ್‌ ಕುಮಾರ್‌ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ‘ಕೋಬ್ರಾ’ ಸಿನಿಮಾದ ಚಿತ್ರೀಕರಣದ ಬಳಿಕ, ವಿಕ್ರಮ್‌ ಮಣಿರತ್ನಂ ಅವರ ‘ಪೊನ್ನಿಯಿನ್‌ ಸೆಲ್ವನ್‌’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು