ಕಿಯಾರಾ ಬಾರೆಯಾ...

ಶನಿವಾರ, ಮೇ 25, 2019
33 °C

ಕಿಯಾರಾ ಬಾರೆಯಾ...

Published:
Updated:
Prajavani

ನಟಿ ಕಿಯಾರಾ ಅಡ್ವಾನಿ ಅವರನ್ನು ಹೀಗೆ ಗೋಗರೆಯುತ್ತಿರುವವರು ಅಖಿಲ್‌ ಅಕ್ಕಿನೇನಿ ಮತ್ತು ಬೊಮ್ಮರಿಲು ಭಾಸ್ಕರ್‌. ತಮ್ಮ ಹೊಸ ಚಿತ್ರಕ್ಕೆ ಈ ಬಳುಕು ಸುಂದರಿಯೇ ಬೇಕು ಎಂದು ಪಟ್ಟುಹಿಡಿದಿರುವ ಈ ಇಬ್ಬರಿಗೆ ದಿನೇ ದಿನೇ ನಿರಾಸೆ ಆಗುತ್ತಲೇ ಇದೆ. 

ರಾಜಮೌಳಿ ನಿರ್ದೇಶನದ ಬಹುಕೋಟಿಯ ಚಿತ್ರ ‘ಆರ್‌ಆರ್‌ಆರ್‌’ ಮತ್ತು ಅಲ್ಲು ಅರ್ಜುನ್‌ ನಟನೆಯ ‘ತ್ರಿವಿಕ್ರಮ್‌’ನಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ ಕಿಯಾರಾ. ಅಲ್ಲದೆ ಅರ್ಜುನ್‌ ರೆಡ್ಡಿ ರೀಮೇಕ್‌ ‘ಕರಣ್ ಸಿಂಗ್‌’ನ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಹಾಜರಿರಲೇಬೇಕಾಗಿದೆ. ಹಾಗಾಗಿ ದಿನಾಂಕ ಹೊಂದಾಣಿಕೆ ಮಾಡಲಾಗದ ಕಾರಣ ಚಿತ್ರೀಕರಣ ಮುಂದಕ್ಕೆ ಹೋಗುತ್ತಲೇ ಇದೆ. ಹಾಗಂತ ಜೂನಿಯರ್‌ ಅಕ್ಕಿನೇನಿ ರಾಜಿಯಾಗುವ ಲಕ್ಷಣಗಳೂ ಕಾಣುತ್ತಿಲ್ಲ. 

ಒಂದು ವೇಳೆ ಕಿಯಾರಾ,  ಆಗೋದಿಲ್ಲ ಮಾರಾಯ ಎಂದು ಕೈಎತ್ತಿದರೆ ಅಖಿಲ್‌ ಯಾವ ನಾಯಕನಟಿಯೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ ಎಂಬುದು ಆಸಕ್ತಿಯ ಸಮಾಚಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !