ಬುಧವಾರ, ಅಕ್ಟೋಬರ್ 28, 2020
25 °C

ರಾಕ್‌ಲೈನ್ ಸುಧಾಕರ್ ನಿಧನಕ್ಕೆ ಕಂಬನಿ ಮಿಡಿದ ದರ್ಶನ್‌, ಧನಂಜಯ್‌, ಸುನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸ್ಯನಟ ರಾಕ್‌ಲೈನ್ ಸುಧಾಕರ್ (60) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.

ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

ಹಲವು ವರ್ಷಗಳ ಕಾಲ ರಾಕ್‌ಲೈನ್‌ ವೆಂಕಟೇಶ್‌ ಪ್ರೊಡಕ್ಷನ್‌ನಲ್ಲಿ ಸುಧಾಕರ್‌ ಕೆಲಸ ಮಾಡಿದ್ದರು. ಹಾಗಾಗಿ, ಅವರಿಗೆ ‘ರಾಕ್‌ಲೈನ್‌ ಸುಧಾಕರ್‌’ ಎಂಬ ಹೆಸರು ಬಂದಿತ್ತು. ಬೆಳಿಗ್ಗೆ ಅವರು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿರುವ ಶಶಿಧರ್‌ ಕೆ.ಎಂ. ನಿರ್ದೇಶನದ ಮೊದಲ ಚಿತ್ರ ‘ಶುಗರ್‌ಲೆಸ್‌’ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಮೇಕಪ್‌ ಹಾಕಿಕೊಂಡು ನಟನೆಗೆ ಸಜ್ಜಾಗಿದ್ದ ಅವರಿಗೆ ಶೂಟಿಂಗ್‌ ಸೆಟ್‌ನಲ್ಲಿಯೇ ಹೃದಯಾಘಾತವಾಗಿದೆ.

ಕೆಲವು ದಿನಗಳ ಹಿಂದೆ ಅವರಿಗೆ ಕೋವಿಡ್‌–19 ಸೋಂಕು ತಗುಲಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಅವರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.

ಸುಧಾಕರ್ ಬೆಳ್ಳಿತೆರೆ ಪ್ರವೇಶಿಸಿದ್ದು ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚರಂಗಿ’ ಚಿತ್ರದ ಮೂಲಕ. ಇದು ತೆರೆಕಂಡಿದ್ದು 2010ರಲ್ಲಿ. ಇದಾದ ಬಳಿಕ ಅವರು ‘ಪರಮಾತ್ಮ’, ‘ಟೋಪಿವಾಲಾ’, ‘ಅಜಿತ್‌’, ‘ಅಧ್ಯಕ್ಷ’, ‘ಕರ್ವ’, ‘ಜೂಮ್‌’, ‘ಪಟಾಕಿ’, ‘ಚಮಕ್‌’, ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’, ‘ಯಜಮಾನ’, ‘ಟಗರು’, ‘ಡೆಮೊ ಪೀಸ್, ‘ಮಾಯಾಬಜಾರ್ 2016’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸುಧಾಕರ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬಿನಿ ಮಿಡಿದಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು