ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯಕೀಯ ವಿಜ್ಞಾನದ ಕಥೆ ಹೊಂದಿರುವ ‘ಕಂಟೈನರ್’ ಚಿತ್ರದ ಟ್ರೇಲರ್‌ ಬಿಡುಗಡೆ

Published : 25 ಸೆಪ್ಟೆಂಬರ್ 2024, 17:41 IST
Last Updated : 25 ಸೆಪ್ಟೆಂಬರ್ 2024, 17:41 IST
ಫಾಲೋ ಮಾಡಿ
Comments

ವೈದ್ಯಕೀಯ ವಿಜ್ಞಾನದ ಕಥೆಯನ್ನು ಹೊಂದಿರುವ ‘ಕಂಟೈನರ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಎಸ್.ನರಸಿಂಹಮೂರ್ತಿ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. 

‘ಚಿತ್ರ ಸೆನ್ಸಾರ್‌ ಮುಗಿಸಿ ಬಿಡುಗಡೆಗೆ ಸಿದ್ಧವಿದೆ. ದಸರಾ ವೇಳೆಗೆ ತೆರೆಗೆ ತರುವ ಆಲೋಚನೆಯಿದೆ. ನಾನು ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿರುವುದರಿಂದ ವೈದ್ಯಕೀಯ ವಿಜ್ಞಾನಕ್ಕೆ ಸಂಬಂದಪಟ್ಟಂತೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸಣ್ಣ ಹಾಗೂ ಧ್ವನಿ ಇಲ್ಲದ ಕಾರ್ಮಿಕನಿಗೂ ಬೆಲೆ ಇರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಕ್ಯಾನ್ಸರ್ ಸುಡುವ ಬೃಹತ್‌  ಯಂತ್ರವನ್ನು ಹಡಗಿನ ಕಂಟೈನರ್‌ನಲ್ಲಿ ಸಾಗಿಸುವಾಗ ನಡೆಯುವ ಘಟನೆಯೇ ಚಿತ್ರದ ಕಥಾವಸ್ತು’ ಎಂದು ಮಾಹಿತಿ ನೀಡಿದರು ನಿರ್ದೇಶಕರು. 

ದತ್ತಾತ್ರೇಯ ಪೂಜಾರಿ, ಪುಣ್ಯ ಗೌಡ ಪ್ರಮುಖ ಪಾತ್ರದಲ್ಲಿದ್ದಾರೆ. ಮಂಜುನಾಥ್.ಜಿ, ರಂಗನಾಥ್, ಮಂಜು.ಬಿ.ಕೆ, ಉದಯಕುಮಾರ್ ಮುಂತಾದವರು ನಟಿಸಿದ್ದಾರೆ. ಅಲಂಕಾರ್‌ ಸಂಗೀತ, ಶ್ರೀನಿವಾಸ್ ಛಾಯಾಚಿತ್ರಗ್ರಹಣ, ಭಾರ್ಗವ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT