ತಿಳಿ ಗುಲಾಬಿ ಬಣ್ಣದ ಗೌನ್ ತೊಟ್ಟು, ಕೊರಳಿಗೆ ಮುತ್ತಿನ ಹಾರ ಧರಿಸಿ, ನಗು ತುಂಬಿದ ಮುಖದೊಂದಿಗೆ ನೆರೆದಿರುವ ಜನರತ್ತ ಕೈಬೀಸುತ್ತಾ ರೆಡ್ ಕಾರ್ಪೆಟ್ ಮೇಲೆ ನಡೆದ ಈ ಸುಂದರಿ ಮನುಷ್ಯಳಲ್ಲ.. ಆದರೆ ಹಾಲಿವುಡ್ನ ಜನಪ್ರಿಯ ಸೆಲೆಬ್ರಿಟಿ. ಇದು ಕ್ರಿಸ್ಟಲ್ ಎಂಬ 'ದಿ ಸೆಲೆಬ್ರಿಟಿ ಮಂಕಿ'ಯ ವಿಸ್ಮಯಕಾರಿ ಕಥೆ.

ಸಿನಿಮಾಗಳಲ್ಲಿ ನಾಯಿ, ಕೋತಿ, ಚಿಂಪಾಂಜಿ, ಆನೆಯಂತಹ ಪ್ರಾಣಿಗಳಿಂದ ನಟನೆ ಮಾಡಿಸುವುದು ಸಹಜ. ಕನ್ನಡದ ಸೇರಿ ಭಾರತೀಯ ಚಿತ್ರರಂಗದ ಎಷ್ಟೋ ಸಿನಿಮಾಗಳು ಪ್ರಾಣಿಗಳ ನಟನೆಯಿಂದಲೇ ಗೆದ್ದಿರುವ ಉದಾಹರಣೆಗಳಿವೆ. ಕೆಲ ವರ್ಷಗಳ ಹಿಂದೆ ಕನ್ನಡದಲ್ಲಿ ಬಿಡಗುಡೆಯಾದ ರಕ್ಷಿತ್ ಶೆಟ್ಟಿ ನಟನೆಯ ‘ಚಾರ್ಲಿ 777’ ಸಿನಿಮಾದ ಗೆಲುವಿನ ಹೆಚ್ಚಿನ ಪಾಲು ಚಾರ್ಲಿ ನಾಯಿಗೆ ಸಲ್ಲುತ್ತದೆ. 2025ರಲ್ಲಿ ಬಿಡುಗಡೆಯಾದ ಮಲಯಾಳದ ‘ಎಕೊ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ನಾಯಿ ‘ಕುರುಂಬಿ’ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಇದೇ ರೀತಿ ಹಾಲಿವುಡ್ನಲ್ಲಿ ತಾನು ನಟಿಸಿದ ಹಲವು ಸಿನಿಮಾಗಳನ್ನು ಬಾಕ್ಸ್ಆಫೀಸ್ನಲ್ಲಿ ಗೆಲ್ಲಿಸಿದ ಕೀರ್ತಿ ‘ಕ್ರಿಸ್ಟಲ್’ಗೆ ಸೇರುತ್ತದೆ.

ಬೇರೆ ಪ್ರಾಣಿಗಳ ರೀತಿ ಕ್ರಿಸ್ಟಲ್ ಸಿನಿಮಾಗಳಲ್ಲಿ ನಟಿಸಿ ಮರೆಯಾಗಿಲ್ಲ. ಈಗಲೂ ಆಕೆ ತುಂಬಾ ಬೇಡಿಕೆಯ ನಟಿ. ಅದೆಷ್ಟೋ ಹಾಲಿವುಡ್ ನಟ–ನಟಿಯರಿಗಿಂತ ಈಕೆಯ ಸಂಭಾವನೆಯೇ ಹೆಚ್ಚಂತೆ!

ಕ್ರಿಸ್ಟಲ್ ಹಿನ್ನೆಲೆ:

ಕೋತಿಗಳಲ್ಲಿ ‘ಕ್ಯಾಪುಚಿನ್’ ಎನ್ನುವ ಜಾತಿಗೆ ಸೇರುವ ಕ್ರಿಸ್ಟಲ್, ಹಾಲಿವುಡ್ನ ಹಲವಾರು ಸಿನಿಮಾಗಳಲ್ಲಿ ನಟಿಸಿದೆ. ಮೇ 6,1994ರಲ್ಲಿ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಜನಿಸಿದ ಕ್ರಿಸ್ಟಲ್ಗೆ ಈಗ 32 ವರ್ಷ.

ಬರ್ಡ್ ಆ್ಯಂಡ್ ಅನಿಮಲ್ಸ್ ಲಿಮಿಟೆಡ್ ಸಂಸ್ಥೆಯ ಟಾಮ್ ಗುಂಡರ್ಸನ್ ಅವರು ಕ್ರಿಸ್ಟಲ್ ಅನ್ನು ಖರೀದಿಸಿ ತರಬೇತಿ ನೀಡಿದ್ದಾರೆ. ಸುಮಾರು 8 ವರ್ಷಗಳ ಕಾಲ ಯುನಿವರ್ಸಲ್ ಸ್ಟುಡಿಯೋಸ್ನಲ್ಲಿ ಲೈವ್ ಶೋಗಳಲ್ಲಿ ಭಾಗವಹಿಸುವ ಮೂಲಕ ಕ್ರಿಸ್ಟಲ್ ನಟನೆ ಕಲಿಯುತ್ತಾಳೆ.

ಅದಾದ ಬಳಿಕ ನಿಧಾನವಾಗಿ ಸಿನಿಮಾ ಲೋಕವನ್ನು ಪ್ರವೇಶಿಸುವ ಕ್ರಿಸ್ಟಲ್ ತನ್ನ ಚುರುಕುತನ, ಮುಖದ ಭಾವ ಮತ್ತು ಮನುಷ್ಯರೊಂದಿಗೆ ಬೆರೆಯುವ ಗುಣದಿಂದಾಗಿ ಎಲ್ಲರ ಗಮನ ಸೆಳೆಯುತ್ತಾಳೆ.

ನಟಿಸಿದ ಪ್ರಮುಖ ಚಿತ್ರಗಳು

ಕ್ರಿಸ್ಟಲ್ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ಅನೇಕ ಟಿವಿ ಶೋಗಳಲ್ಲಿ ನಟಿಸಿದೆ. ‘ನೈಟ್ ಅಟ್ ದಿ ಮ್ಯೂಸಿಯಂ’ ಚಿತ್ರದಲ್ಲಿ 'ಡೆಕ್ಸ್ಟರ್' ಎಂಬ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದಿದೆ. ದಿ ಹ್ಯಾಂಗೋವರ್ ಪಾರ್ಟ್ 2, ಜಾರ್ಜ್ ಆಫ್ ದಿ ಜಂಗಲ್, ದಿ ಫ್ಯಾಬೆಲ್ಮ್ಯಾನ್ಸ್ ಸೇರಿದಂತೆ ಬಾಲಿವುಡ್ ನಟ ಅಜಯ್ ದೇವಗನ್ ಅವರ ‘ಟೋಟಲ್ ಧಮಾಲ್’ ಚಿತ್ರದಲ್ಲಿಯೂ ಕ್ರಿಸ್ಟಲ್ ನಟಿಸಿದೆ.

ಸಂಭಾವನೆ: ಕ್ರಿಸ್ಟಲ್ ಒಂದು ಸಿನಿಮಾಗೆ ಅಥವಾ ಟಿವಿ ಶೋಗೆ ಪಡೆಯುವ ಸಂಭಾವನೆ ಅನೇಕ ಸಾಮಾನ್ಯ ನಟರಿಗಿಂತ ಹೆಚ್ಚಿರುತ್ತದೆ. ಒಂದು ವರದಿಯ ಪ್ರಕಾರ, ಒಂದು ಟಿವಿ ಸರಣಿಯ ಕೇವಲ 9 ಎಪಿಸೋಡ್ಗಳಿಗೆ ಸುಮಾರು $108,000 (ಅಂದಾಜು ₹90 ಲಕ್ಷ ರೂಪಾಯಿ) ಸಂಭಾವನೆ ಪಡೆದಿದೆ.

ಪ್ರಶಸ್ತಿ ಮತ್ತು ಸಾಧನೆಗಳು

2015ರಲ್ಲಿ ಪ್ರಾಣಿಗಳ ಆಸ್ಕರ್ ಎಂದೇ ಕರೆಯಲಾಗುವ ‘ಪಾವ್ಸ್ಕರ್ಸ್’ ಪ್ರಶಸ್ತಿ ಸಮಾರಂಭದಲ್ಲಿ ಕ್ರಿಸ್ಟಲ್ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈಗ ಎಲ್ಲಿದೆ?

ಕ್ರಿಸ್ಟಲ್ ಈಗಲೂ ಜೀವಂತವಾಗಿದ್ದು, ತನ್ನ ತರಬೇತುದಾರ ಟಾಮ್ ಗುಂಡರ್ಸನ್ ಅವರೊಂದಿಗೆ ಲಾಸ್ ಏಂಜಲೀಸ್ನಲ್ಲಿ ವಾಸಿಸುತ್ತಿದೆ. ಕ್ಯಾಪುಚಿನ್ ಕೋತಿಗಳು ಸಾಮಾನ್ಯವಾಗಿ 45-50 ವರ್ಷಗಳ ಕಾಲ ಬದುಕುತ್ತವೆ. ಹಾಗಾಗಿ ಕ್ರಿಸ್ಟಲ್ ಇನ್ನೂ ಅನೇಕ ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಾಧ್ಯತೆಯಿದೆ.

ದೊಡ್ಡ ಸಿನಿಮಾಗಳ ಪ್ರೀಮಿಯರ್ ಶೋಗಳಲ್ಲಿ ಕ್ರಿಸ್ಟಲ್ ಮನುಷ್ಯರಂತೆಯೇ ಸುಂದರವಾದ ಉಡುಪುಗಳನ್ನು ತೊಟ್ಟು ರೆಡ್ ಕಾರ್ಪೆಟ್ ಮೇಲೆ ನಡೆದು ಹೋಗುವುದನ್ನು ನೋಡುವುದೇ ಚೆಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.